ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್(Petrol Bunk) ಒಂದರಲ್ಲಿ ಕಳ್ಳತನ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಮಟಾ ಪೊಲೀಸರು(Kumta Police) ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಫೆಬ್ರವರಿ 1 ಮತ್ತು 2, 2026ರ ನಡುವಿನ ರಾತ್ರಿ ಈ ಕಳ್ಳತನ ನಡೆದಿತ್ತು. ಕಳ್ಳರು ಪೆಟ್ರೋಲ್ ಬಂಕ್(Petrol Bunk) ಆಫೀಸಿನ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿ, ಕಪಾಟಿನ ಲಾಕರ್ ಬಾಗಿಲನ್ನು ಮೀಟಿ ಅದರಲ್ಲಿದ್ದ 25,000 ರೂ. ನಗದು ಹಣವನ್ನು ದೋಚಿದ್ದರು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ(Kumta Police Station) ಪ್ರಕರಣ ದಾಖಲಾಗಿತ್ತು.
ಸಿಪಿಐ ಯೋಗೇಶ ಕೆ.ಎಂ. ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ, ಸಾವಿತ್ರಿ ನಾಯಕ ಮತ್ತು ಸಿಬ್ಬಂದಿಗಳ ವಿಶೇಷ ತಂಡ(Special Team) ರಚಿಸಲಾಗಿತ್ತು. ಆರೋಪಿಗಳ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರು ಫೆಬ್ರವರಿ 11ರಂದು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕುಮಟಾ ತಾಲೂಕಿನ ವನ್ನಳ್ಳಿ, ಕಲ್ಲುಡ್ಕ ನಿವಾಸಿ ಅಸ್ಲಂ ಮಹಮ್ಮದ್ ಹನೀಫ ದಂಡು (19) ಹಾಗೂ ಇನ್ನೋರ್ವ 17 ವರ್ಷದ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 3 ಲಕ್ಷ ರೂ. ಮೌಲ್ಯದ ಎರಡು ಸುಜುಕಿ ಬರ್ಗಮನ್ ಸ್ಕೂಟರ್‌ಗಳು, ಕಳ್ಳತನಕ್ಕೆ ಬಳಸಿದ ಆಯುಧಗಳು ಹಾಗೂ ಕಳವು ಮಾಡಲಾದ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ನಿರೀಕ್ಷಕರು, ಪಿಎಸ್‌ಐಗಳು ಹಾಗೂ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ, ಚಿದಾನಂದ ನಾಯ್ಕ, ಗಿರೀಶ ನಾಯ್ಕ, ಹರೀಶ ನಾಯಕ, ಅರುಣ ನಾಯ್ಕ ಮತ್ತು ಚಾಲಕ ಮಾರುತಿ ಗಾಳಪೂಜಿ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕ ವಲಯದಲ್ಲೂ ಪೊಲೀಸರ ಕಾರ್ಯಕ್ಕೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ
ಸಿದ್ದಾಪುರ ಕೊಲೆ ಪ್ರಕರಣ: ಜ್ಯೋತಿಷಿ ಸೇರಿ ಐವರಿಗೆ ನ್ಯಾಯಾಂಗ ಬಂಧನ ವಿಸ್ತರಣೆ
