ಭಟ್ಕಳ(BHATKAL) : ಪೊಲೀಸ್ ಇಲಾಖೆಗೆ ಸಂದಾಯವಾಗಬೇಕಾದ ದಂಡದ ಹಣವನ್ನ ಚಿನ್ನದ ವ್ಯಾಪಾರಿ(GOLD MERCHANT) ಖಾತೆಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಭಟ್ಕಳ ಪಿ.ಎಸ್.ಐ ಯಲ್ಲಪ್ಪ ಮಾದರ ಅವರನ್ನ ಅಮಾನತ್ ಗೊಳಿಸಲಾಗಿದೆ.
ಪಿ ಎಸ್ ಐ ಅವರ ಕರ್ತವ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನಲೆ ಮತ್ತು ಭಟ್ಕಳ ಪೊಲೀಸ್ ಉಪಾಧೀಕ್ಷಕರ ಪ್ರಾಥಮಿಕ ವರದಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಭಟ್ಕಳ ನಗರ ಠಾಣೆ ಪಿ ಎಸ್ ಐ ಅವರು ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಡಿವೈ ಎಸ್ಪಿ ಸೂಚಿಸಲಾಗಿತ್ತು. ಸದರಿಯವರ ವರದಿಯನ್ನು ಆಧರಿಸಿ ಯಲ್ಲಪ್ಪ ಮಾದರ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ನಗರ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಇಲೆಕ್ಟ್ರಾನಿಕ್ ಯಂತ್ರದ ಮೂಲಕ ಸ್ಥಳ ದಂಡ ವಸೂಲಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಪಡೆದ ಸ್ಥಳದಂಡವನ್ನು ಪೋನ್-ಪೇ ಮುಖಾಂತರ ಸಾರ್ವಜನಿಕರ ಖಾತೆಗೆ ಹಾಕಿಸಿ ನಂತರ ಅವರಿಂದ ನಗದು ಹಣ ಪಡೆದು ಇಲಾಖಾ ನಿಯಮವನ್ನು ಉಲಂಘಿಸಿದ ಬಗ್ಗೆ ಕಂಡುಬಂದಿದೆ. ಹೀಗಾಗಿ ಇಲಾಖಾ ವಿಚಾರಣೆ ಬಾಕಿಯಿರಿಸಿ ತಕ್ಷಣ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳದಲ್ಲಿ ಹೆಲ್ಮೆಟ್(HELMET) ಧರಿಸದ ವಾಹನ ಸವಾರರಿಂದ ದಂಡ ವಸೂಲಿ ಮಾಡುವ ನೆಪದಲ್ಲಿ ಪಿಎಸ್ಐ ಯಲ್ಲಪ್ಪ ತಮಗೆ ಪರಿಚಿತರಿರುವ ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿಸುತ್ತಿದ್ದರು. ಇದು ಇಲಾಖೆಯ ನಿಯಮ ಉಲ್ಲಂಘನೆ ಕೂಡ ಆಗಿತ್ತು. ಈ ಬಗ್ಗೆ ಭಟ್ಕಳ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿ ಬಂದಿತ್ತು. ಹೀಗಾಗಿ ಅಮಾನತ್ ಆದೇಶ ಮಾಡಲಾಗಿದೆ.
ಇದನ್ನು ಓದಿ : ಪಿ ಎಸ್ ಐ ಏನಿದು ಹಕಿಕತ್
ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರ ಬಂಧನ
ಆಸ್ಪತ್ರೆಗೆ ಹೋದ ಮಹಿಳೆ ನದಿಯಲ್ಲಿ ಪತ್ತೆ