ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಕಲಿ ವಿಳಾಸಸೃಷ್ಟಿಸಿ ಕರ್ನಾಟಕದಿಂದ ಗೋವಾದಿಂದ(Karnataka to Goa) ರಾಜ್ಯಕ್ಕೆ ಅಕ್ರಮವಾಗಿ ಮದ್ಯಸಾರ(Spirit) ಸಾಗಿಸುತ್ತಿದ್ದ ಎರಡು ಟ್ಯಾಂಕರ್ ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ.

ರಾಮನಗರ ಬಳಿ ಕಾರವಾರ(Karwar) ಮತ್ತು‌ ದಾಂಡೇಲಿಯ(Dandeli)  ಅಬಕಾರಿ ಇಲಾಖೆ(Exice Department) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಾರೀ ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ವಿಶೇಷ ತಂಡವೊಂದು ಬಾರೀ ಮೊತ್ತದ ಸ್ಪೀರಿಟ್ ತುಂಬಿ ಸಾಗಿಸುತ್ತಿದ್ದ ಎರಡು ಟ್ಯಾಂಕರ್ ವಾಹನವನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ(Madhyapradesha) ಮೂಲದ ಮಗ್ಗರ್ ಸಿಂಗ್ ಮತ್ತು ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಬಂಧಿತರು. 

ದಾವಣಗೆರೆ(Davanagere) ಶುಗರ್ ಕಂಪನಿ ಲಿಮಿಟೆಡ್ ನಿಂದ ಗೋವಾದ(Goa) ಗ್ಲೋಬಲ್ ಕೆಮ್ ಕಾರ್ಪ್ ಕುಂಡೆಮ್ ಗೆ ಮತ್ತು ದಾವಣಗೆರೆಯ ಶ್ರೀ ಸಾಯಿ ಟ್ರೆಡರ್ಸ್ ಅಂಡ್ ಕಂಪನಿ ಕೊಲೆಹಳ್ಳಿಯಿಂದ ಗೋವಾದ ಪಿಲರ್ನೆಯಲ್ಲಿರುವ ವರ್ದನ್ ಸಪ್ಲಿಮೆಂಟ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ಸಾಗಿಸುತ್ತಿತ್ತು ಎನ್ನಲಾಗಿದೆ. ಅಬಕಾರಿ ಅಧಿಕಾರಿಗಳು ಸಿಬ್ಬಂದಿಗಳು ತಪಾಸಣೆ ಮಾಡುವ ಸಂದರ್ಭದಲ್ಲಿ ವಾಹನದಲ್ಲಿ ಸ್ಪೀರಿಟ್ ಇರೋದು ಗೊತ್ತಾಯಿತು. ವಾಹನ ತೆರಳಬೇಕಾದ ಅಡ್ರೆಸ್ ಪರಿಶೀಲಿಸಿದಾಗ ನಕಲಿ ವಿಳಾಸ(Duplicate Address) ಎಂಬುದು ಗೊತ್ತಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಎ ಎಲ್ ನಾಗೇಶ ಮಾಹಿತಿ ನೀಡಿದ್ದಾರೆ.

 ಎರಡು ಟ್ಯಾಂಕರ್ ವಾಹನದಲ್ಲಿ 50ಸಾವಿರ ಲೀಟರ್ ಸ್ಪೀರಿಟ್ ನ ಅಂದಾಜು ಮೊತ್ತ 40 ಲಕ್ಷ ರೂಪಾಯಿದ್ದಾಗಿದೆ. ವಾಹನ ಸೇರಿ ಒಟ್ಟು 90 ಲಕ್ಷ ರೂಪಾಯಿ ಸ್ವತ್ತುಗಳನ್ನ ಜಪ್ತಿ(Seaz) ಮಾಡಲಾಗಿದೆ. ಅಕ್ರಮ ಸಾಗಾಟದಾರರು ಸ್ಪೀರಿಟನ್ನ ಗೋವಾದ ಮದ್ಯ ತಯಾರಿಕಾ ಘಟಕಕ್ಕೆ ಸಾಗಿಸಿ ಮದ್ಯಸಾರದಿಂದ ನಕಲಿ ಮದ್ಯ ತಯಾರಿಸುವವರಿದ್ದರು.  ಈ ಎರಡು ಟ್ಯಾಂಕರ್ ಮದ್ಯದಿಂದ ಸುಮಾರು 48 ಕೋಟಿ ರೂಪಾಯಿ ಮೌಲ್ಯದಷ್ಟು ಮದ್ಯ ತಯಾರಿಸಿ ಅದನ್ನ ಕರ್ನಾಟಕ ಸೇರಿ ಬೇರೆಬೇರೆ ರಾಜ್ಯಗಳಿಗೆ ವಾಮ ಮಾರ್ಗಗಳ ಮೂಲಕ ಪೂರೈಕೆ ಮಾಡುತ್ತಿದ್ದರೆಂದು   ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ಮೂಲಕ ಅಕ್ರಮಗಳನ್ನ ತಡೆದಿದ್ದಾರೆ.  ಕಾರ್ಯಾಚರಣೆಗೆ ಅಧಿಕಾರಿಗಳಿಂದ ವ್ಯಾಪಕ  ಪ್ರಶಂಸೆ ವ್ಯಕ್ತವಾಗಿದೆ.

ಇದನ್ನು ಓದಿ : ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಂದಿನ ಬಜೆಟ್‌ನಲ್ಲಿ ಮಂಜೂರು – ಸಿಎಂ ಸಿದ್ದರಾಮಯ್ಯ ಭರವಸೆ

ಕಡಲತೀರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರ ಬಂಧನ.