ಯಲ್ಲಾಪುರ(Yallapura) : ಇಲ್ಲಿನ  ರಾಷ್ಟ್ರೀಯ ಹೆದ್ದಾರಿ 63(NH 63) ಅರೆಬೈಲ್   ಘಟ್ಟದಲ್ಲಿ(Arebail ghat) ಲಾರಿಯೊಂದು ಪಲ್ಟಿ ಹೊಡೆದ ಪರಿಣಾಮವಾಗಿ  ರಸ್ತೆ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ

ಹರಿದ್ವಾರದಿಂದ(Haridwara) ಪೇಪರ್ ಲೋಡ್(Paper Load) ತುಂಬಿಕೊಂಡು ಕೇರಳ(Keral) ಕಡೆ  ಲಾರಿ ಸಂಚರಿಸುತಿತ್ತು. ಬೆಳಿಗ್ಗೆ 5-30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದು ಬಿದ್ದಿದೆ. ಇದರಿಂದ ಸುಮಾರು ಆರು ತಾಸುಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ.

ಸ್ಥಳೀಯರು ಹೆದ್ದಾರಿ ಇಲಾಖೆ(Highway Department) ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಧ್ಯೆ ಬಿದ್ದ ಲಾರಿಯನ್ನು ಮೇಲಕ್ಕೆತ್ತಿದ್ದಾರೆ.  ಯಲ್ಲಾಪುರ  ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಂಚಾರ ಸುಗಮಗೊಳಿಸಿದ್ದಾರೆ.

ಇದನ್ನು ಓದಿ : ಮಿಡಿಯುವ ಹೃದಯಕ್ಕೆ ಸ್ಪಂದಿಸಿದ ಕೇರಳ ಸಂಘ ಸಂಸ್ಥೆಗಳು

ಮಾಜಾಳಿ ಗೆಟಲ್ಲಿ ಚಾಲಕನಿಗೆ ಹಲ್ಲೆ. ತೀವ್ರ ರೋಧನೆ

ಅಂಕೋಲಾ, ಮುರ್ಡೇಶ್ವರದಲ್ಲಿ ಕಳ್ಳತನ, ಬಂಧನ