ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಂದಾಪುರ(Kundapura) : Junior Chamber International India ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ JCI India Alumni Club – Zone 15 ಅಧ್ಯಕ್ಷರ ಪದಗ್ರಹಣ ಹಾಗೂ ಪದಾಧಿಕಾರಿಗಳ ಸ್ಥಾಪನಾ ಸಮಾರಂಭವು ಇತ್ತೀಚಿಗೆ ಕುಂದಾಪುರದ Sumedha Fort Sahana Convention Hall ನಲ್ಲಿ ವಿಜೃಂಭಣೆಯಿಂದ ನಡೆಯಿತು.
2026ನೇ ಸಾಲಿನ JCI alumni club Zone 15 ಅಧ್ಯಕ್ಷರಾಗಿ ಆಯ್ಕೆಯಾದ JCI ಸೇನೆಟರ್ ಅಬ್ದುಲ್ ಜಬ್ಬಾರ್ ಸಾಹೇಬ್ ಮತ್ತು ಅವರ ತಂಡದ ಪದಗ್ರಹಣ ಸಮಾರಂಭವು ಅದ್ದೂರಿಯಿಂದ ನೆರವೇರಿತು.
ಸಮಾರಂಭವನ್ನು ಜೆಸಿಐ ಇಂಡಿಯಾದ ಪೂರ್ವ ರಾಷ್ಟ್ರೀಯ ಅಧ್ಯಕ್ಷ JFS Anis C Mathew ಉದ್ಘಾಟಿಸಿ ಮಾತನಾಡುತ್ತಾ, “ಅಲ್ಯೂಮ್ನಿ ಕ್ಲಬ್ಗಳು ಸಂಘಟನೆಗೆ ಮಾರ್ಗದರ್ಶಕ ಶಕ್ತಿ. ಅನುಭವ ಮತ್ತು ನಾಯಕತ್ವದ ಸಮನ್ವಯದಿಂದ ಸಮಾಜಸೇವೆ ಮತ್ತಷ್ಟು ಗಟ್ಟಿಯಾಗಬೇಕು” ಎಂದು ಕರೆ ನೀಡಿದರು.
Zone 15 ಅಧ್ಯಕ್ಷ JFS Santhosh Shetty ನೂತನ ಪದಾಧಿಕಾರಿಗಳಿಗೆ ಶುಭಹಾರೈಕೆ ಸಲ್ಲಿಸಿ, ವಲಯದ ಬೆಳವಣಿಗೆಗೆ ಅವರಿಂದ ವಿಶೇಷ ಕಾರ್ಯಯೋಜನೆಗಳನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು.
ಗೌರವ ಅತಿಥಿಗಳಾಗಿ JFS Y Sukumar ಆಡಳಿತ ಸಮಿತಿ ಸದಸ್ಯರು, JCI India ಹಾಗೂ JCI India ಫೌಂಡೇಶನ್ ನಿರ್ದೇಶಕ JFR Alan Rohan Vaz ಉಪಸ್ಥಿತರಿದ್ದು ಸಂದೇಶ ನೀಡುತ್ತಾ Zone 15 ವ್ಯಾಪ್ತಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ JCI Alumni ಸಂಘಟನೆಯ ಬಲವರ್ಧನೆಗೆ ಒತ್ತು ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
2026ರ ಅಧ್ಯಕ್ಷರಾದ JCI ಸೇನೆಟರ್ ಅಬ್ದುಲ್ ಜಬ್ಬಾರ್ ಸಾಹೇಬ್ ತಮ್ಮ ಸ್ವೀಕಾರ ಭಾಷಣದಲ್ಲಿ, “Zone 15 ಅಲ್ಯೂಮ್ನಿ ಕ್ಲಬ್ನ್ನು ಹೆಚ್ಚು ಚುರುಕುಗೊಳಿಸಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೂರು ಜಿಲ್ಲೆಗಳಲ್ಲಿ ಸಮಗ್ರ ಸೇವೆ ನೀಡಲು ಸಂಕಲ್ಪಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.
JCI Bhatkal City ವತಿಯಿಂದ ಭವ್ಯ ಕಾರ್ಯಕ್ರಮದ ಆತಿಥ್ಯ ನೀಡಲಾಯಿತು. ಈ ಸಂದರ್ಭದಲ್ಲಿ JCI ಭಟ್ಕಳ ಸಿಟಿ ಅಧ್ಯಕ್ಷ ಜೆಸಿ ಮೊಹಮ್ಮದ್ ಆಜಿಂ ಹಾಗೂ ಕಾರ್ಯದರ್ಶಿಯಾಗಿ ಪೂರ್ವ ಅಧ್ಯಕ್ಷ ಜೆಸಿ ಆರ್ಯನ್ ವಾಸು ನಾಯ್ಕ್ ಈ ಕಾರ್ಯಕ್ರಮದ ನಿರ್ದೇಶಕ ಜೆಸಿ ಸುರೇಶ್ ಪೂಜಾರಿ ಉಪಸಿತರಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರು, ಅಲ್ಯೂಮ್ನಿ ಸದಸ್ಯರು ಹಾಗೂ ವಿವಿಧ ಸ್ಥಳೀಯ ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಸಚಿವರಿಂದ ಎಸ್ ಎಸ್ ಎಲ್ ಸಿ ಪ್ರಗತಿ ಪರಿಶೀಲನಾ ಸಭೆ
ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಮರೆಯಲಾಗದು : ಗಂಗಾಧರ್ ದೊಡ್ಡವಾಡ.
