ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕೈಗಾ ಅಣು ಸ್ಥಾವರದಲ್ಲಿ(Kaiga Plant) ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನಾಗರಿಕರು ಕೈಗಾ ಚಲೋ(Kaiga Chalo) ಪಾದಯಾತ್ರೆ ಆರಂಭಿಸಿದ್ದಾರೆ.
ಕೈಗಾ ಯೋಜನೆ(Kaiga Project) ಆಗುವ ಸಂದರ್ಭದಲ್ಲಿ ಕಾರವಾರದ ಬಡ ಕುಟುಂಬಗಳು ತಮ್ಮ ಜಮೀನುಗಳನ್ನ ಕಳೆದುಕೊಂಡಿದ್ದವು. ಉದ್ಯೋಗವಾದರೂ ಸಿಗುವುದೆಂಬ ಆಸೆ ಕೂಡ ನುಚ್ಚು ನೂರಾಗಿದೆ. ಕಳೆದ 40 ವರ್ಷಗಳಿಂದ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಸ್ಥಳೀಯರಿಗೆ ಸೂಕ್ತ ಕೆಲಸ ಸಿಗುತ್ತಿಲ್ಲ. ಹೀಗಾಗಿ ಈ ಭಾಗದ ನಾಗರಿಕರು ಉದ್ಯೋಗಕ್ಕಾಗಿ ದೂರದ ಮಹಾರಾಷ್ಟ್ರ(Maharashtra), ಗೋವಾ(Goa) ಭಾಗದಲ್ಲಿ ವಲಸೆ ಹೋಗುವಂತಾಗಿದೆ. ಅತಿ ಕಡಿಮೆ ಸಂಬಳಕ್ಕಾಗಿ ಪ್ರತಿನಿತ್ಯ ಸಾವಿರಾರು ಯುವಕರು ಗೋವಾಕ್ಕೆ ಹೋಗಿ ಬರುತ್ತಿದ್ದಾರೆ.
ಕೈಗಾದಲ್ಲಿ ಅಧಿಕಾರಿಯಾಗಿರುವ ಅನ್ಯ ರಾಜ್ಯಗಳ ಅಧಿಕಾರಿಗಳು ಸ್ಥಳೀಯರನ್ನ ಕಡೆಗಣಿಸುತ್ತಿದ್ದಾರೆಂಬ ಆರೋಪವಿದೆ. ಇದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳ ಸ್ವಜನ ಪಕ್ಷಪಾತ ಖಂಡಿಸಿ ಇಲ್ಲಿನ ನಾಗರಿಕರು ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಕಾರವಾರದ ಸಿದ್ಧಿವಿನಾಯಕ ದೇವಾಲಯದಲ್ಲಿ(Karwar Siddivinayak Temple) ಪೂಜೆ ಸಲ್ಲಿಸಿದ ನಾಗರಿಕರು ಪಾದಯಾತ್ರೆಗೆ ಆರಂಭಿಸಿದ್ದಾರೆ. ಮಾರ್ಚ್ ಎರಡಕ್ಕೆ ಕೈಗಾದಲ್ಲಿ ಪ್ರತಿಭಟನೆ ನಡೆಸಿ ಮನವಿ ನೀಡಲಿದ್ದಾರೆ.
ಕೈಗಾ ಅಣುವಿದ್ಯುತ್ ಸ್ಥಾವರದ(NPCIL Kaiga) ಐದು ಮತ್ತು ಆರನೇ ಘಟಕ ಕಾಮಗಾರಿ ನಡೆಯುತ್ತಿದ್ದು ಮುಂದೆ ನಡೆಯುವ ನೇಮಕಾತಿಯಲ್ಲಿ ಸ್ಥಳೀಯ ಯುವ ಜನತೆಗೆ ಕೆಲಸ ನೀಡುವ ಮೂಲಕ ಬೇಡಿಕೆ ಈಡೇರಿಸಬೇಕೆಂಬ ಒತ್ತಾಯಿಸಿದ್ದಾರೆ.
ಇದನ್ನು ಓದಿ : ಮಾರ್ಚ್ಒಂದರಂದು ಹುತ್ತದ ದೇವತೆ ಶ್ರೀ ಗೌಳಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ.
