ಭಟ್ಕಳ (Bhatkal): ಮನೆಯಲ್ಲಿ ಆಯತಪ್ಪಿ ಬಿದ್ದು  ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

ಕುಮಟಾದ ಗಾಂಧಿನಗರದ(Kumta Gandhinagar) ನಿವಾಸಿ ಹಾಲಿ ಮುರ್ಡೇಶ್ವರ (Murdeshwar) ವಾಸಿಸುತ್ತಿದ್ದ ಅನೂಪ ನಾಗೇಶ ಶೆಟ್ಟಿ(35) ಮೃತ ಯುವಕ.   ಭಟ್ಕಳದ ಸರ್ವೇ ಕಚೇರಿಯಲ್ಲಿ ಸರ್ವೇಯರ್ (serveior) ಆಗಿ ವೃತ್ತಿ ಮಾಡುತ್ತಿದ್ದ ಅನೂಪ್ ತನ್ನ ಹೆಂಡತಿ ಮಕ್ಕಳೊಂದಿಗೆ ಮುರ್ಡೇಶ್ವರದ ಸಣಬಾವಿಯ ಹತ್ತಿರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಗುರುವಾರ ರಾತ್ರಿ ಸುಮಾರಿಗೆ ಬಾಡಿಗೆ ಮನೆಯ ಕೆನೊಪಿಯಲ್ಲಿ ಆಯ ತಪ್ಪಿ ಮನೆಯ ಮುಂಬದಿಯ ಕಿಟಕಿಯ ಮೇಲೆ ಕೈ ಉರಿ ಗಾಜಿನ ಮೇಲೆ ಬಿದ್ದ ಪರಿಣಾಮ ಆತನ ಬಲಗೈ ಮುಂಗೈ ಮೇಲಿನ ರಕ್ತ ನಾಳಕ್ಕೆ ಗಾಯವಾಗಿ ರಕ್ತ ಸ್ರಾವವಾಗಿತ್ತು. ಭಟ್ಕಳ ಸರ್ಕಾರಿ ಆಸ್ಪತ್ರೆಗೆ (Bhatkal Govermment Hospital) ಚಿಕಿತ್ಸೆಗೆ ದಾಖಲಿಸಲಾಗಿತ್ತು. ವಿಪರೀತ ರಕ್ತ ಸ್ರಾವದಿಂದ ಅವರು  ಮೃತಪಟ್ಟಿದ್ದಾರೆ. ಈ ಕುರಿತು ಮೃತರ ತಂದೆ ನಾಗೇಶ ಶೆಟ್ಟಿ ಮುರ್ಡೇಶ್ವರ ಠಾಣೆಯಲ್ಲಿ(Murdeshwar station) ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ : ಚಿರತೆ ಸಾವು. ಅರಣ್ಯ ಇಲಾಖೆಯ  ಸಿಬ್ಬಂದಿಗಳಿಂದ ಅಂತ್ಯಕ್ರಿಯೆ

ಕಾಲಿಗೆ ಚಪ್ಪಲಿ ಧರಿಸಲ್ಲ. ಅಣ್ಣಾ ಮಲ್ಲೈ ಶಪಥ.

ಫ್ಲೈಯಿಂಗ್ ಆಫೀಸರ್ ಸಾಯಿಶ್ರೀಗೆ ಅಸ್ನೋಟಿಯಲ್ಲಿ ಸನ್ಮಾನ

ಪಾಕಿಸ್ತಾನದಲ್ಲಿರುವ ಮನಮೋಹನ್ ಸಿಂಗ್ ಬಾಲಕರ ಶಾಲೆ.