ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾ ಕೇಂದ್ರ(Star Choice Dance & Art Academy) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ(Kannada & Culture Department) ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ  ಮಹಿಳಾ ದಿನಾಚರಣೆ ಕಾರ್ಯಕ್ರಮ(Women Day Programme) ಅದ್ದೂರಿಯಿಂದ ನಡೆಸಲಾಯಿತು.
ನಗರದ ಅಜ್ವಿ ಓಶಿಯನ್(Ajvi Ocean)  ಆವರಣದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮವನ್ನು ಉದ್ಯಮಿ ನಿರ್ಮಲಾ ರಾಜೇಶ್ ಕಾಮತ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಆಶಾನಿಕೇತನ ಶಾಲೆಯ(Ashaniketana School) ಪ್ರಾಂಶುಪಾಲರಾದ ಸಿಸ್ಟರ್ ಎಲೀಜಬೆತ್ ಅವರು ವಹಿಸಿದ್ದರು. ವಕೀಲರಾದ ಜ್ಯೋತಿ ಮೀರಾಶಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದಿನಾಚರಣೆ ಅಂಗವಾಗಿ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ(Cultural Programme), ಕ್ರೀಡೆ(Sports), ಜಾನಪದ ನೃತ್ಯ(Folk Dance), ಸಂಗೀತ(Music) ಕಾರ್ಯಕ್ರಮ ನಡೆಯಿತು.
ವಿಶೇಷವಾಗಿ “ಮಿಸ್ ಕಾರವಾರ 2026” (Miss Karwar-2026)ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಒಟ್ಟು 25 ಮಹಿಳೆಯರು ಭಾಗವಹಿಸಿದ್ದರು. ಕಾರವಾರದ  ಕಾಂಚನ ಗೌಡ ‘ಮಿಸ್ ಕಾರವಾರ’ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ(First Karwar) ಪಡೆದುಕೊಂಡರು. ದ್ವೀತಿಯ ಬಹುಮಾನವನ್ನು(Second Prize) ಸುತಪಾ ಸಂಕಿ ಕೊಲ್ಕತ್ತಾ  ಪಡೆದುಕೊಂಡರು. ಸೂಪರ್ ವುಮೆನ್(Super women) ಬಹುಮಾನವನ್ನ  ಗೀತಾ ಕೊಠಾರಕರ್, ಬೆಸ್ಟ್ ವಾಕ್(Best Walk) ಸಂಜನಾ ಸಿದ್ದನಗೌಡರ್  ಪಡೆದುಕೊಂಡರು.

ವೇದಿಕೆಯ ಮೇಲೆ ಸ್ಟಾರ್ ಚಾಯ್ಸ್ ನೃತ್ಯ ಕಲಾ ಅಕಾಡೆಮಿಯ ಗೌರವಾಧ್ಯಕ್ಷ ಪ್ರಕಾಶ್ ನಾಯ್ಕ,  ಅಧ್ಯಕ್ಷರಾದ ರೋಹಿದಾಸ್ ಬಾನಾವಳಿ, ಅಭಿಷೇಕ್ ನೇತ್ರಕರ್, ಜ್ಯೋತಿ ಶ್ರೀಪಾದ ನಾಯ್ಕ, ಸಂಸ್ಥಾಪಕ ರಾಜನ್ ಬಾನಾವಳಿಕರ ಹಾಗೂ ಸ್ಟಾರ್ ಚಾಯ್ಸ್ ಕೇಂದ್ರದ ಸದಸ್ಯರು, ಸ್ಟಾರ್ ಚಾಯ್ಸ್ ನಾರಿಮಣಿಯರ ತಂಡ ಉಪಸ್ಥಿತರಿದ್ದರು.

ಇದನ್ನು ಓದಿ : ಭಟ್ಕಳದಲ್ಲಿ ಕೂಲಿ ಕಾರ್ಮಿಕ ಸಂಶಯಾಸ್ಪದ ಸಾವು. ಪೊಲೀಸರಿಂದ ತನಿಖೆ.

ಭಟ್ಕಳದಲ್ಲಿ ಕದ್ದು ಮುಚ್ಚಿ ಜಾನುವಾರು ಸಾಗಾಟ. ಇಬ್ಬರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.