ಕಾರವಾರ(KARWAR) : ಶಿರೂರು(SHIRURU) ಗುಡ್ಡ ಕುಸಿತ ಘಟನೆಯಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ ಅವರ ಮಗಳಿಗೆ ಉದ್ಯೋಗ ನೀಡುವುದರ ಮೂಲಕ ಸಚಿವ ಮಂಕಾಳ್ ವೈದ್ಯ ಮಾತು ಉಳಿಸಿಕೊಂಡಿದ್ದಾರೆ.
ಜಗನ್ನಾಥ ನಾಯ್ಕ ಅವರ ಮಗಳು ಪಲ್ಲವಿ ನಾಯ್ಕ ಅವರಿಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಾಟಾ ಆಪರೇಟರ್ ಉದ್ಯೋಗ ನೀಡಲಾಗಿದೆ. ಇಂದು ಆದೇಶ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(MANKAL VAIDYA) ಅವರು ಹೊನ್ನಾವರದಲ್ಲಿ ಜರುಗಿದ ಶಿಕ್ಷಕ ದಿನಾಚರಣೆಯಲ್ಲಿ ನೀಡಿದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ(LAKSHMIPRIYA) ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ಜುಲೈ 16 ರಂದು ಉಂಟಾದ ಪ್ರಕೃತಿ ವಿಕೋಪದಲ್ಲಿ ಶಿರೂರು ಗುಡ್ಡ ಕುಸಿತ(LANDSLIDE) ಘಟನೆ ನಡೆದಿತ್ತು. ಘಟನೆಯಲ್ಲಿ ಜಗನ್ನಾಥ ನಾಯ್ಕ ಅವರು ಕಣ್ಮರೆಯಾಗಿದ್ದಾರೆ. ಇವರೆಗೂ ಅವರ ಮೃತದೇಹವಾಗಲಿ, ಜೀವಂತವಾಗಿ ಸಿಕ್ಕಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್(MLA SATISH SAIL) ಮನೆಗೆ ಹೋಗಿ ಸಾಂತ್ವನ ಹೇಳಿದ್ದರು. ಮನೆಯಲ್ಲಿ ಹೆಣ್ಣು ಮಕ್ಕಳೇ ಇರುವುದರಿಂದ ಕುಟುಂಬಕ್ಕೆ ಆಧಾರವಾಗಿರುವ ತಂದೆ ಇಲ್ಲದಿರುವುದನ್ನ ಗಮನಿಸಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಇದೀಗ ಸಚಿವರು ಮಾತು ಉಳಿಸಿಕೊಂಡಿದ್ದಾರೆ.
ಇದನ್ನು ಓದಿ : ನಡು ರಸ್ತೆಯಲ್ಲಿ ಕಂಡಕ್ಟರ್ ಗಳ ಮಾರಾಮಾರಿ
ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿಗೆ ಚೈತ್ರಾ ಮನವಿ