ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಬೈಕ್ ಸವಾರನೋರ್ವನಿಗೆ ಟಿಪ್ಪರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ತಾಲೂಕಿನ ಎಡಬಡ್ರು ಕ್ರಾಸ್ ಸಮೀಪ ಸಂಭವಿಸಿದೆ.
ನಾಗರಾಜ ಸುಕ್ರಾ ಹರಿಕಾಂತ (21) ಅಪಘಾತದಲ್ಲಿ ಸಾವನಪ್ಪಿದ ದುರ್ದೈವಿ. ಮೃತ ಮುರ್ಡೇಶ್ವರದ ಹಿರೇದೋಮಿ ನಿವಾಸಿಯಾಗಿದ್ದಾನೆ. ಹೊನ್ನಾವರ ಕಡೆಯಿಂದ ಮುರ್ಡೇಶ್ವರ(Honnavar to Murdeshwar) ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಬೈಕ್ ಗೆ ಢಿಕ್ಕಿ(Tipper lorry Bike Collision) ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಚಾಲನೆಯೆ ಅವಘಡಕ್ಕೆ ಕಾರಣ ಎಂದು ದೂರಲಾಗಿದೆ. ಹೊನ್ನಾವರ (Honnavar) ತಾಲೂಕಿನ ಮಂಕಿ ಅನಂತವಾಡಿಯ ದಿನೇಶ ರಾಮಚಂದ್ರ ನಾಯ್ಕ (35) ಟಿಪ್ಪರ್ ಓಡಿಸುತ್ತಿದ್ದನು.
ಡಿಕ್ಕಿಯ ಪರಿಣಾಮ ನಾಗರಾಜ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಗಂಭೀರ ಗಾಯಗೊಂಡಿದ್ದ. ತಕ್ಷಣ ಗಾಯಾಳುವನ್ನು ಮಣಿಪಾಲದ (Manipal) ಕಸ್ತೂರಬಾ ಆಸ್ಪತ್ರೆಗೆ (Kasturba Hospital) ಸಾಗಿಸಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ (Murdeshwar Police Station) ದೂರು ನೀಡಿದ್ದಾರೆ. ಟಿಪ್ಪರ್ ಚಾಲಕ ದಿನೇಶ ರಾಮಚಂದ್ರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುರ್ಡೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ಮಾರ್ಚ್ 18ರಿಂದ ಎಸ್ಎಸ್ಎಲ್ಸಿ ಪರೀಕ್ಷೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ.
ಕಾರವಾರ ಮೆಡಿಕಲ್ ವಿದ್ಯಾರ್ಥಿಗಳ ಸರಣಿ ಸಾವು. ಬೈಕ್ ಅಪಘಾತದಲ್ಲಿ ಓರ್ವ ಸಾವು, ಇನ್ನೋರ್ವ ಗಂಭೀರ.
ಇಲೆಕ್ಟ್ರಿಕ್ ವಸ್ತುಗಳನ್ನು ಕದ್ದ ಕಳ್ಳರಿಗೆ ಪೊಲೀಸರ ಶಾಕ್.
‘ಮಿಸ್ ಕಾರವಾರ’ ಆಗಿ ಕಾಂಚನಾ ಗೌಡ. ಕೋಲ್ಕತ್ತಾ ಮೂಲದ ಸುತಪಾ ರನ್ನರ್ ಅಪ್.
