ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) : ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ(Delivery) ಹಾಗೂ ಸಿಜೇರಿಯನ್‌ ಚಿಕಿತ್ಸೆಗೆ(Operation) ಬಡವರಿಂದ ಹಣ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ(Haliyal MLA) ಆರ್ ವಿ‌ ದೇಶಪಾಂಡೆ (R. V. Deshpande) ಅವರು ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಆರೋಗ್ಯ ರಕ್ಷಾ ಸಮಿತಿ(Arogya Raksha Committee) ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಪ್ರಶ್ನಿಸಿದ ದೇಶಪಾಂಡೆ, “ಹೆರಿಗೆ ಮಾಡಿಸಿ ಎಷ್ಟು ಹಣ ಪಡೆಯುತ್ತೀರಿ?” ಎಂದು ನೇರವಾಗಿ ಕೇಳಿದರು.
ವೈದ್ಯರಾದ ಡಾ. ಅಖಿಲ ಕಿತ್ತೂರ ಮತ್ತು ಡಾ. ಕೀರ್ತಿ ಅವರು,
“ನಾವು ಯಾರಿಂದಲೂ ಕೇಳಿ ಹಣ ಪಡೆಯುವುದಿಲ್ಲ; ಅವರು ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ” ಎಂದು ಉತ್ತರಿಸಿದರೆಂದು ತಿಳಿದುಬಂದಿದೆ.

ಇದರಿಂದ ಸಿಟ್ಟಾದ ಶಾಸಕ ದೇಶಪಾಂಡೆ, “ಕೊಟ್ಟಷ್ಟು ತೆಗೆದುಕೊಳ್ಳುತ್ತೇವೆ ಎಂದರೆ ಅದರ ಅರ್ಥ ಏನು? ನಿಮಗೆ ಮಾನ ಮರ್ಯಾದೆ ಇಲ್ಲವೇ?” ಎಂದು ತೀವ್ರವಾಗಿ ಪ್ರಶ್ನಿಸಿದರು. “ಇನ್ನು ಮುಂದೆ ಯಾರಿಂದಾದರೂ ಹಣ ಪಡೆದರೆ ಪೊಲೀಸ್ ದೂರು(Police Complaints) ದಾಖಲಿಸುತ್ತೇನೆ” ಎಂದು ಖಡಕ್ ಎಚ್ಚರಿಕೆ  ನೀಡಿದರು. ಅಲ್ಲದೆ, ಇದುವರೆಗೆ ಹಣ ಪಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದರು.

“ಬಡವರ ಹತ್ತಿರ ಸುಲಿಗೆ ಮಾಡಿದರೆ ಹುಷಾರ್. ನನ್ನ ಮೇಲೆ ಪ್ರಕರಣ ದಾಖಲಾಗಿದ್ದರೂ ಪರವಾಗಿಲ್ಲ — ನನಗೆ ಏನು ಮಾಡಬೇಕೆಂದು ಗೊತ್ತು,” ಎಂದು ದೇಶಪಾಂಡೆ(Deshapande) ಕಿಡಿಕಾರಿದರು.

ಇಷ್ಟು ದಿನ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ(Dandeli Government Hospital) ಬಡ ಕುಟುಂಬದವರಿಂದ ವೈದ್ಯರು ಹಣ ಪಡೆದುಕೊಳ್ಳುತ್ತಿದ್ದಾರೆಂಬ ಆರೋಪ ನಾಗರಿಕರಿಂದ ಕೇಳಿ ಬಂದಿತ್ತು. ಇಂದಿನ ವಿದ್ಯಾಮಾನ  ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : ಬೈಕ್ ಗೆ  ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ.  ಸವಾರ ಸ್ಥಳದಲ್ಲಿ ದುರ್ಮರಣ.

ಗಾಂಜಾ ಘಾಟು ಇಬ್ಬರು ಯುವಕರ  ಬಂಧನ

ಭೀಕರ ಆ್ಯಸಿಡ್ ದಾಳಿ: ಐವರಿಗೆ ಗಾಯ. ಆಟೋ ಚಾಲಕನಿಂದ ಕೃತ್ಯ.