ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ/ಶಿರಸಿ(Bhatkal/Sirsi) :  ಉತ್ತರಕನ್ನಡಜಿಲ್ಲೆಯಇಬ್ಬರು‌ ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ(CM Gold Medal) ಆಯ್ಕೆಯಾಗಿದ್ದಾರೆ.

ಭಟ್ಕಳ ನಗರ ಠಾಣೆಯ ಪಿಎಸ್ಐ(Bhatkal Town PSI). ನವೀನ್ ಎಸ್. ನಾಯ್ಕ ಮತ್ತು  ಶಿರಸಿ ಮಾರ್ಕೆಟ್ ಠಾಣೆಯ ಕೈಮ್ ಪಿಎಸ್ಐ (Sirsi Market Crime PSI)  ರಾಜಕುಮಾರ ಉಕ್ಕಲಿ ಅವರು ಆಯ್ಕೆಯಾದವರು.

ನವೀನ್ ನಾಯ್ಕ ಅವರು ಮಾದಕದ್ರವ್ಯ ಪ್ರಕರಣಗಳನ್ನು(Drugs Case) ಒಳಗೊಂಡಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು(Criminal Case) ಯಶಸ್ವಿಯಾಗಿ ಭೇದಿಸಿ ಸೇವಾ ದಕ್ಷತೆ ತೋರಿದ ಹಿನ್ನೆಲೆಯಲ್ಲಿ ಈ ಗೌರವ ಅವರಿಗೆ ಲಭಿಸಿದೆ. ಮುಖ್ಯಮಂತ್ರಿ ಪದಕ(CM Medal) ನಿಯಮಾವಳಿಗಳ ಪ್ರಕಾರ ಪದಕ ಪ್ರದಾನಕ್ಕೆ ರಾಜ್ಯ ಸರ್ಕಾರ(State Government) ಅನುಮೋದನೆ ನೀಡಿದೆ.

ಪಿಎಸ್‌ಐ ನವೀನ ನಾಯ್ಕ(PSI Naveen Naik) ಅವರು ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭಟ್ಕಳ ನಗರ ಠಾಣೆಯಲ್ಲಿ(Bhatkal Town Station) ಸೇವೆ ಸಲ್ಲಿಸುತ್ತಿರುವ ಇವರು, ಈ ಹಿಂದೆ ಜಿಲ್ಲೆಯ ಕುಮಟಾ(Kumta), ಗೋಕರ್ಣ(Gokarn) ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ತಮ್ಮ ಕರ್ತವ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ಮುತುವರ್ಜಿ ಹಾಗೂ ಸುದೀರ್ಘ ಕಾಲದ ಈ ಸೇವೆಯನ್ನು ಗುರುತಿಸಿ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪೊಲೀಸ್ ಇಲಾಖೆಯಲ್ಲಿ(Police Department) ಕರ್ತವ್ಯನಿಷ್ಠೆ, ಅಪರಾಧ ಪತ್ತೆಯಲ್ಲಿ ತೋರಿದ ತ್ವರಿತ ಕ್ರಮಗಳು ಹಾಗೂ ವೃತ್ತಿಪರ ನೈಪುಣ್ಯವನ್ನು ಪರಿಗಣಿಸಿ ನವೀನ್ ಎಸ್. ನಾಯ್ಕ ಅವರನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಅವರ ಚುರುಕುತನ ಮತ್ತು ಪರಿಣಾಮಕಾರಿ ಕಾರ್ಯವೈಖರಿ ಪೊಲೀಸ್ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನೂ ಶಿರಸಿ ಮಾರ್ಕೆಟ್ ಠಾಣೆಯ ಕೈಮ್ ಪಿಎಸ್‌ಆಯ್(Sirsi Market Station Crime PSI) ಆಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ರಾಜಕುಮಾರ ಉಕ್ಕಲಿ ಅವರು ಕ್ರಿಯಾಶೀಲ ವ್ಯಕ್ತಿಯಾಗಿರುವ ಇವರು ಶಿರಸಿಗೆ ಬಂದ ಮೇಲೆ ಹೊಸ ಪ್ರಕರಣಗಳ ಜೊತೆಗೆ ಅನೇಕ ಹಳೆ ಪ್ರಕರಣಗಳನ್ನು ಹೊರ ರಾಜ್ಯಗಳಲ್ಲಿ ಭೇದಿಸಿರುವುದನ್ನು ಉಲ್ಲೇಖಿಸಬಹುದಾಗಿದೆ. ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡವರನ್ನು, ದೇಶ ದ್ರೋಹ ಪ್ರಕರಣದಲ್ಲಿ ಭಾಗಿಯಾದವರನ್ನು, ದರೋಡೆ(Robbery), ಕಳ್ಳತನ(Theft) ಸೇರಿದಂತೆ ಅನೇಕ ಪ್ರಕರಣಗಳನ್ನು ಎದೆಗಾರಿಕೆಯಿಂದ ಪತ್ತೆ ಹಚ್ಚಿದ ಫಲವಾಗಿ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಇವರ ಸೇವೆಯನ್ನು ಮೆಚ್ಚಿ ಸರಕಾರವು ರಾಜಕುಮಾರ ಇವರನ್ನು ಎಸ್ಐಟಿ ತನಿಖೆಗೆ(SIT Investigation) ನಿಯುಕ್ತಿಗೊಳಿಸಿತ್ತು. ಸರಳ ಸಜ್ಜನಿಕೆ ವ್ಯಕ್ತಿತ್ವದ ಪಿಎಸ್‌ಐ ರಾಜಕುಮಾರ(PSI Rajakumar) ಇವರಿಗೆ ಮುಖ್ಯಮಂತ್ರಿ ಪದಕ ಬಂದಿರುವುದಕ್ಕೆ ಶಿರಸಿ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ : ನಿಂತಿದ್ದ ಕಂಟೈನರ್‌ಗೆ ಎರ್ಟಿಗಾ ಕಾರು ಡಿಕ್ಕಿ.  ತಾಯಿ-ಮಗಳು ದುರ್ಮರಣ

ಸಹಕಾರಿ ಸಂಸ್ಥೆ ಚುನಾವಣೆ ಮತ್ತು ಸಿಎಂ ಮನೆಗೆ ಬಂದ ಉರಿಯಿಂದ ಹತ್ಯೆಗೆ ಯತ್ನ : ಗೋಪಾಲಕೃಷ್ಣ ಸಂಶಯ.