ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news)  ಭಟ್ಕಳ(Bhatkal) : ಸ್ನೇಹಿತನ ಅಂಗಡಿಯಲ್ಲಿಮೊಬೈಲ್(Mobile) ತೆಗೆದುಕೊಂಡಿದ್ದ ಆಸಾಮಿಯೊಬ್ಬ ಹಣ ಕೇಳಿದಾಗ ಪತ್ನಿಯ ಖಾಸಗಿ ಪೋಟೋ ಬಹಿರಂಗಪಡಿಸುವ ಬೆದರಿಕೆ ಹಾಕಿದ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ(Bhatkal Town Police Station) ದೂರು‌ ದಾಖಲಾಗಿದೆ.

ಇಲ್ಲಿನ  ಬಂದರ್ ರಸ್ತೆ(Binder Road) ನಿವಾಸಿ  ಗತಫಾನ್ ಅಹ್ಮದ್ (23) ಎಂಬುವವರೇ ತಮ್ಮ ಐಫೋನ್ ಕಳೆದುಕೊಂಡವರು. ಭಟ್ಕಳದ ಆಜಾದ್‌ ನಗರ ನಿವಾಸಿ ಮಹಮದ್ ಅಶೀಲ (22) ಮೊಬೈಲ್ ಪಡೆದ ಆಸಾಮಿಯಾಗಿದ್ದಾನೆ. 2025 ನವೆಂಬ‌ರ್ ತಿಂಗಳಲ್ಲಿ ಭಟ್ಕಳದ ಸಂಗೀತಾ ಮೊಬೈಲ್(Sangeeta Mobile) ಅಂಗಡಿಯಲ್ಲಿ ಸುಮಾರು ₹75,000 ಮೌಲ್ಯದ iPhone 16 (128GB) ಮೊಬೈಲ್ ಖರೀದಿಸಿದ್ದರು. ಇದರಲ್ಲಿ ₹59,237 ಸಾಲದ ರೂಪದಲ್ಲಿ ಪಡೆದು ಕಂತುಗಳಲ್ಲಿ ಹಣ ಪಾವತಿಸುತ್ತಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ಭಟ್ಕಳದ ಆಜಾದ್‌ ನಗರ ನಿವಾಸಿ ಮಹಮದ್ ಅಶೀಲ (22) ತನ್ನ ಮನೆಗೆ ಬಂದು ಮೊಬೈಲ್‌ ನೀಡುವಂತೆ, ಬಳಿಕ ಹಣ ನೀಡುವುದಾಗಿ ಭರವಸೆ ನೀಡಿದ್ದರಿಂದ ಗತಫಾನ್ ಅಹ್ಮದ್‌ ಮೊಬೈಲ್ ನೀಡಿದ್ದಾಗಿ ತಮ್ಮ  ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಮೊಬೈಲ್ ನ ಹಣ ಕೇಳಿದಾಗ ತಪ್ಪಿಸಿಕೊಳ್ಳುತ್ತಿದ್ದ ಮಹಮದ್‌ ಅಶೀಲ, ಫೆಬ್ರವರಿ 2026ರಂದು ದುಬೈಗೆ(Dubai) ತೆರಳಿದ್ದಾನೆ. ಕರೆ ಮಾಡಿದಾಗ, ‘ಹಣ ಕೊಡುವುದಿಲ್ಲ, ಏನು ಬೇಕಾದರೂ ಮಾಡು ”ದೇಕ್ ಚಿನಾಲಿಕೆ, ರಾಂಡಕೆ ಅಂತಾ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ‘ಮೇರೆ ಪಾಸ್ ಪೈಸೆ ಮಾಂಗಾತೋ ಮೈ ಐಸಾ ಕರೂಂಗಾ’ ಅಂತಾ ನಿನ್ನ ಹಾಗೂ ನಿನ್ನ ಹೆಂಡತಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ   ಭಟ್ಕಳ ಪೋಲಿಸರು(Bhatkal Police) ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಗೋಪಾಲಕೃಷ್ಣ ಹತ್ಯೆ ಯತ್ನ ಪ್ರಕರಣ. ಕಾಂಗ್ರೆಸ್ ನಲ್ಲಿ ಕೊತಕೊತ ವಾತಾವರಣ.

ಭಟ್ಕಳ ಮತ್ತು ಶಿರಸಿಯಲ್ಲಿ ಬಂಗಾರದ ಅಧಿಕಾರಿಗಳು.