ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಓರಿಸ್ಸಾದ ಭುವನೇಶ್ವರದಲ್ಲಿ(Orissa Bhubaneswar) ನಡೆದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ 2026 (Femina Miss India 2026) ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್(MLA Satish Sail) ಅವರ ಪುತ್ರಿ ಸಾದ್ವಿ  ಸತೀಶ್ ಸೈಲ್  ಚಾಂಪಿಯನ್(Sadhvi Sail Champion) ಆಗಿ ಹೊರಹೊಮ್ಮಿದ್ದಾರೆ.

ಭುವನೇಶ್ವರದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ (KIIT) ಯಲ್ಲಿ ನಡೆದ ಅದ್ದೂರಿ ಹಾಗೂ ಭವ್ಯ  ಸಮಾರಂಭದಲ್ಲಿ ಸಾಧ್ವಿ ಸೈಲ್(Sadhvi Sail) ಅವರು ಈ ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡು ಇತಸೈಲ್()(History) ಸೃಷ್ಟಿಸಿದ್ದಾರೆ.

ಈ ಐತಿಹಾಸಿಕ ಗೆಲುವಿನೊಂದಿಗೆ ಅವರು ಮುಂಬರುವ ‘ಮಿಸ್ ವರ್ಲ್ಡ್ 2027’ (Miss World 2027) ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ(International Compitation) ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿದ್ದಾರೆ.

ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರಾಜನಂದಿನಿ ಪವಾರ್ (Rajnandini Pawar) ಅವರು ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದರೆ, ಯೂನಿಯನ್ ಟೆರಿಟರಿಯ ಶ್ರೀಅದ್ವೈತ (Sree Advaita) ಅವರು ದ್ವಿತೀಯ ರನ್ನರ್-ಅಪ್ ಆಗಿ ಆಯ್ಕೆಯಾಗಿದ್ದಾರೆ.

ಸಾಧ್ವಿ ಸತೀಶ್ ಸೈಲ್(Sadhvi Satish Sail) ಅವರು ಕೇವಲ ಮಾಡೆಲ್ ಮಾತ್ರವಲ್ಲ, ಓರ್ವ ಯಶಸ್ವಿ ಉದ್ಯಮಿಯೂ ಹೌದು. ಮೂಲತಃ ಗೋವಾದಲ್ಲಿ(Native Goa) ಉದ್ಯಮಿಯಾಗಿ ಗುರುತಿಸಿಕೊಂಡಿರುವ ಇವರು, ಕ್ಯಾಲಿಫೋರ್ನಿಯಾ, ಬುರಿಟೋ ಸೇರಿದಂತೆ ಹಲವು ಪ್ರಸಿದ್ಧ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ನಿರ್ಮಾಣ ಹಾಗೂ ಅಭಿವೃದ್ಧಿ (Construction & Development) ಕ್ಷೇತ್ರದಲ್ಲಿ ಸಹ-ಸ್ಥಾಪಕರಾಗಿಯೂ ಅವರು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇಶದ ವಿವಿಧ ರಾಜ್ಯಗಳ ಪ್ರತಿಭಾವಂತ ಯುವತಿಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ ಈ ಬಾರಿಯ ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಯು ಮಹಿಳೆಯರ ಸೌಂದರ್ಯ, ಬುದ್ಧಿಮತ್ತೆ ಮತ್ತು ವ್ಯಕ್ತಿತ್ವದ ಅನಾವರಣಕ್ಕೆ ಅದ್ಭುತ ವೇದಿಕೆಯಾಗಿತ್ತು.

ತಮ್ಮ ಮುದ್ದಿನ ಮಗಳು ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸಂತಸದ ಸುದ್ದಿ ತಿಳಿಯುತ್ತಿದ್ದಂತೆ, ಕಾರವಾರ ಶಾಸಕ ಸತೀಶ್ ಸೈಲ್(Karwar MLA Satish Sail) ಅವರು ತಕ್ಷಣವೇ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಹಾಗೂ ಮಗಳ ಈ ಮಹತ್ತರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಾಧ್ವಿ ಸೈಲ್ ಕೆನಡಾದಲ್ಲಿ(Canada) ಅರ್ಥಶಾಸ್ತ್ರ(Economics) ಮತ್ತು ಮಾರ್ಕೆಟಿಂಗ್(Marketing) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅನಾಥರ, ಅಸಹಾಯಕರ ನೋವಿಗೆ ಸ್ಪಂದಿಸುತ್ತಿದ್ದಾಳೆ. ಮಗಳು ಮೊದಲು ಕಾರವಾರದ ಅಮೃತ ವಿದ್ಯಾಲಯದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಓದಿದ್ದು, ಬಳಿಕ ಇಂಡಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಮೊದಲು ಮಗಳನ್ನ ಹೊರಗೆ ಕಳಿಸಲು ಅಳುಕಿತ್ತು. ಗೋವಾ ಸ್ಪರ್ದಿಯಾಗಿ ಗೆದ್ದು ಈಗ ಗೊಇವಾ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ.  ಮಗಳ ಸಾಧನೆ ಖುಷಿ ತಂದಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ರಾಜ್ಯ, ದೇಶಾದ್ಯಂತ ಸತೀಶ್ ಸೈಲ್  ಅಭಿಮಾನಿಗಳು ಪೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನು ಓದಿ : ಹುಬ್ಳಿ ಟು ಯಲ್ಲಾಪುರ ಮರ್ಡರ್ ಮಿಸ್ಟ್ರಿ, ಕಾರ್ ಪೈರ್ ಕೇಸ್. ಮೂವರ ಬಂಧನ.