ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಎರಡನೇ ಮದುವೆಯಾಗಲು(2nd Marriage) ಸಿದ್ಧತೆ ನಡೆಸಿದ್ದ ವೈದ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಕನ್ನಡ(Uttarakannada) ಜಿಲ್ಲೆಯ ಶಿರಸಿಯಲ್ಲಿ(Sirsi) ನಡೆದಿದೆ.
ನಗರದ ನ್ಯೂ ಕೆ.ಎಚ್.ಬಿ. ಕಾಲೋನಿಯ 9 ನೇ ಕ್ರಾಸ್ ಎರಡನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಯುರ್ವೇದ ವೈದ್ಯ(Ayurveda Doctor) ಡಾ.ರಮೇಶ್ ಕಲಘುಟಕರ್ (51) ಕೊಲೆಯಾದ ದುರ್ದೈವಿ.
ಭಾನುವಾರ ಸಾಯಂಕಾಲ ಈ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಒಬ್ಬರೇ ಇರುತ್ತಿದ್ದ ವೈದ್ಯರ ಮನೆಗೆ ಇಂದು ಸಂಬಂಧಿಕರು ಬಂದಾಗ ಬಾಗಿಲು ತೆರೆಯದಿದ್ದಾಗ ಬಾಗಿಲು ಒಡೆದು ತೆಗೆದಾಗ ಕೊಲೆಯಾಗಿರುವ ವಿಷಯ ಗೊತ್ತಾಗಿದೆ.
ಐದು ತಿಂಗಳ ಹಿಂದೆ ವೈದ್ಯ ರಮೇಶ್ ಪತ್ನಿ ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದರು. ಸೋಮವಾರ ಶಿರಸಿ ತಾಲೂಕಿನ ಮಂಜಗುಣಿಯಲ್ಲಿ(Sirsi Manjuguni) ವೈದ್ಯರು ತಮ್ಮ ಪತ್ನಿಯ ತಂಗಿಯ ಜೊತೆಯಲ್ಲಿಯೇ ಮದುವೆ ಆಗಲು ನಿರ್ಧರಿಸಿದ್ದರು. ಹೀಗಾಗಿ ಕುಟುಂಬದವರು ಭಾನುವಾರ ಡಾ.ರಮೇಶ್ ಮನೆಗೆ ಬಂದಿದ್ದಾರೆ. ಕೊಲೆಯಾದ ವಿಷಯ ತಿಳಿದ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಶ್ವಾನ ದಳದೊಂದಿಗೆ(Dog Squad) ಸ್ಥಳಕ್ಕೆ ಶಿರಸಿ ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮ, ಮಾರುಕಟ್ಟೆ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರಾದ ವೈದ್ಯರ ಓರ್ವ ಮಗ ಬೆಂಗಳೂರಿನಲ್ಲಿ(Bangalore) ಹಾಗೂ ಇನ್ನೊರ್ವ ಉತ್ತರ ಪ್ರದೇಶದಲ್ಲಿ(Uttarapradesh) ಮೆಡಿಕಲ್(Medical) ಮಾಡುತ್ತಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ(Sirsi Market Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮಗಳಿಂದ ಶಾಸಕರಿಗೆ ಅಕ್ಷಯ ತೃತೀಯ ಗಿಪ್ಟ್. ಸಾಧ್ವಿ ಸತೀಶ ಸೈಲ್ ಗೆ ‘ಫೆಮಿನಾ ಮಿಸ್ ಇಂಡಿಯಾ 2026’ ಕಿರೀಟ.
ಹುಬ್ಳಿ ಟು ಯಲ್ಲಾಪುರ ಮರ್ಡರ್ ಮಿಸ್ಟ್ರಿ, ಕಾರ್ ಪೈರ್ ಕೇಸ್. ಮೂವರ ಬಂಧನ.

