ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್(Uttarakannada District Cooperative Fish sale Federation) ನೂತನ ಅಧ್ಯಕ್ಷರಾಗಿ ದಿ. ರಾಜು‌ ತಾಂಡೇಲ‌ ಅಭಿಮಾನಿ ಬಳಗದ(Raju Tandel Fans Group)   ಪ್ರಶಾಂತ ತುಕಾರಾಮ ತಾಂಡೇಲ ಹಾಗೂ ಉಪಾಧ್ಯಕ್ಷರಾಗಿ ಪ್ರಮೋದ ಬಾನಾವಳಿಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾರ್ಚ್ 29ರಂದು ನಡೆದ ಚುನಾವಣೆಯಲ್ಲಿ  ದಿ. ರಾಜು‌ ತಾಂಡೇಲ‌ ಅಭಿಮಾನಿ ಬಳಗದ(Raju Tandel Fans Group) ಬಹುತೇಕ ಸದಸ್ಯರು ಗೆಲುವು ಸಾಧಿಸಿದ್ದಾರೆ. ಒಟ್ಟೂ 15 ಸ್ಥಾನಗಳ ಪೈಕಿ 14 ಸ್ಥಾನಗಳಿಗೆ  ಚುನಾವಣೆ ನಡೆದಿತ್ತು.

ಸೋಮವಾರ ಫೆಡರೇಶನ್ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ನಡೆಯಿತು. ಚುನಾವಣಾ ಅಧಿಕಾರಿ(Election Officer) ಶ್ರೀದೇವಿ ಕಟ್ಟಿಮನೆ ಕಾರ್ಯ ನಿರ್ವಹಿಸಿದರು. ಸಭೆಯಲ್ಲಿ ಒಮ್ಮತದಿಂದ ಪ್ರಶಾಂತ ತುಕಾರಾಮ ತಾಂಡೇಲ ಹಾಗೂ ಪ್ರಮೋದ ‌ಬಾನಾವಳಿಕರ ಅವರನ್ನು ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಪ್ರಶಾಂತ ಮಾತನಾಡಿ, ಸಾಹುಕಾರ ರಾಜು ತಾಂಡೇಲ ಅವರು ನನ್ನನ್ನ ಪರ್ಶಿಯನ್ ಬೋಟ್ ಯುನಿಯನ್ ಅಧ್ಯಕ್ಷರನ್ನಾಗಿ ಮಾಡಿದ್ದು, ಫೆಡರೇಶನ್ ಗೆ ಮುಂದೆ ಬರಬೇಕೆಂದು‌ ಹೇಳಿದ್ದರು. ಅವರ ಆಶಯದಂತೆ ಇವತ್ತು‌ ಎಲ್ಲರ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ಫೆಡರೇಶನ್ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ತಮ್ಮ ಅವಧಿಯಲ್ಲಿ ಎಲ್ಲರ ಸಹಕಾರ ಕೋರಿದರು.

ನೂತನ ಉಪಾಧ್ಯಕ್ಷರಾದ ಪ್ರಮೋದ ಬಾನಾವಳಿಕರ ಮಾತನಾಡಿ, ದಿ ರಾಜು‌ ತಾಂಡೇಲ ಅವರ ಆಶಯದಂತೆ ಉತ್ತರಕನ್ನಡ ಜಿಲ್ಲೆಯ ಮೀನುಗಾರರ, ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇಲಾಖೆ ಅಧಿಕಾರಿಗಳ, ಸಿಬ್ಬಂದಿಗಳ ಸಹಕಾರ ಮುಖ್ಯವಾಗಿ ಬೇಕಾಗಿದೆ. ಆಯ್ಕೆಗೊಳಿಸಿದ ಎಲ್ಲಾ ನಿರ್ದೇಶಕರಿಗೆ ಧನ್ಯವಾದ ಕೋರಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ಈರಾ ತಾಂಡೇಲ, ಬೀರಪ್ಪ ಈರಾ ಹರಿಕಂತ್ರ, ಸಂಪತ್ ಮಹಾದೇವ ಹರಿಕಂತ್ರ,  ಪ್ರಶಾಂತ್ ಗಣಪತಿ ಹರಿಕಂತ್ರ, ಉಲ್ಲಾಸ ಪೇಟು ಅಸ್ನೋಟಿಕರ್, ವರ್ಷಾ ರಾಮನಾಥ ಬೆಳೂರಕರ, ಶ್ರೀಮತಿ ಸವಿತಾ ನಿತಿನ್ ಗಾಂವಕರ, ಬೆಳಕೆಯ  ದಿವಾಕರ ದಾಸಿ ಮೊಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಿ ರಾಜು ತಾಂಡೇಲ ಅಭಿಮಾನಿ ಬಳಗದವರೇ ಅಧ್ಯಕ್ಷ ಮತ್ತು ‌ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿಮಾನಿ ಬಳಗದ ಸದಸ್ಯರು ವಿಜಯೋತ್ಸವ ಆಚರಿಸಿದರು. ಸುಭಾಷ್ ದುರ್ಗೇಕರ, ವಿನಾಯಕ ಹರಿಕಂತ್ರ, ದೇವರಾಯ ಸೈಲ್, ಶ್ರೀಪಾದ ಕೋಬ್ರೆಕರ, ಗೌರೀಶ ಸೇರಿದಂತೆ ಇತರರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಫೆಡರೇಶನ್ ವತಿಯಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.

ಇದನ್ನು ಓದಿ : ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದ ವೈದ್ಯನ ಹತ್ಯೆ. ಶಿರಸಿಯಲ್ಲಿ ಬೆಚ್ಚಿ ಬೀಳಿಸಿದ ಘಟನೆ.

ಮಗಳಿಂದ ಶಾಸಕರಿಗೆ ಅಕ್ಷಯ ತೃತೀಯ ಗಿಪ್ಟ್. ಸಾಧ್ವಿ ಸತೀಶ ಸೈಲ್ ಗೆ  ‘ಫೆಮಿನಾ ಮಿಸ್ ಇಂಡಿಯಾ 2026’ ಕಿರೀಟ.