ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಜೋಯಿಡಾ(Joida) : ತಾಲೂಕಿನ ಕುಂಬಾರವಾಡಾದಲ್ಲಿ(Kumbarwada) ವ್ಯಕ್ತಿಯೋರ್ವ ತಾನು ಅಬಕಾರಿ ಅಧಿಕಾರಿ(Exice Officer)  ಎಂದು ಅಂಗಡಿಗಳಿಗೆ ನುಗ್ಗಿ ತಪಾಸಣೆ ನಡೆಸಿದ  ಘಟನೆ  ನಡೆದಿದೆ.

ಬ್ಲಾಕ್ ಕಲರ್ ಸ್ಕೂಟರ್  ಮೇಲೆ ಬಂದಿದ್ದ  ಈತ ಕುಂಬಾರವಾಡಾದ ಮೂರು ಅಂಗಡಿಗಳಿಗೆ ಹೋಗಿ ತಾನು ದಾಂಡೇಲಿ ಎಕ್ಸೈಜ್  ಆಫೀಸಿನಿಂದ(Dandeli Exice Officer) ಬಂದಿದ್ದೇನೆ  ಎಂದು ಹೇಳಿ ಧಮಕಿ ಹಾಕಿದ್ದಾನೆ. ಅಂಗಡಿ ಒಳಗೆ ಹೋಗಿ ತಪಾಸಣೆ ನಡೆಸಿದ್ದಾನೆ . ಹಣ ಲಪಟಾಯಿಸುವ ಉದ್ದೇಶ ಹೊಂದಿರುವ ಆತ ಒಬ್ಬನೇ ಬೈಕ್ ಮೇಲೆ ಬಂದು ಹೀಗೆ ಅಂಗಡಿ ಒಳಗೆ ಹೋಗುತ್ತಿದ್ದಾಗ ಸಂಶಯಗೊಂಡ ಸ್ಥಳಿಯರು ವಿಚಾರಣೆ ಮಾಡಿದಾಗ ಉತ್ತರ ನೀಡಲು ತಡ ಬಡಿಸಿದ್ದಾನೆ .

ಆಗ ಸ್ಥಳೀಯರು ಹೆಚ್ಚು ಜಮಾಯಿಸುತ್ತಿದ್ದಂತೆ  ಈತ ಕಾಲ್ಕಿತ್ತಿದ್ದು  ಅಣಶಿ, ಕದ್ರಾ ಮಾರ್ಗವಾಗಿ(Anashi, Kadra Routr) ಸ್ಕೂಟರ್ ಮೇಲೆ ಎಸ್ಕೇಪ್  ಆಗಿದ್ದಾನೆ.

ಕುಂಬಾರವಾಡಾದಲ್ಲಿ ಮಾಡಿದ ಹಾಗೆ  ತಾಲೂಕಿನ ವಿವಿಧ ಕಡೆಗಳಲ್ಲಿ  ಈತ ಹಗಲು ಮತ್ತು ರಾತ್ರಿಯಲ್ಲಿ ಎಕ್ಸೈಜ್ ಆಫೀಸರ್(Exice Officer) ಎಂದು ಹೇಳಿ ಅಂಗಡಿ, ಮನೆಗಳಿಗೆ ನುಗ್ಗುವುದು ಆತಂಕದ ವಿಷಯವಾಗಿದೆ, ಮನೆ ಗಳಲ್ಲಿ ಒಬ್ಬರೇ ಹೆಣ್ಣುಮಕ್ಕಳು ಇರುವಾಗ ಇಂತವರು ಬಂದು ಧರೋಡೆ ಮಾಡಿದರೆ ಗತಿಯೇನು ಎಂಬ ಭಯದ ವಾತಾವರಣ ಗ್ರಾಮೀಣ ಜನರಲ್ಲಿ(Rural People) ಮೂಡಿದೆ. ಪೊಲೀಸರು ತಕ್ಷಣ ಈತನನ್ನು ಬಂಧಿಸಿ ತನಿಖೆ ಮಾಡಬೇಕೆಂದು  ಸಾರ್ವಜನಿಕ ರು ಒತ್ತಾಯಿಸಿದ್ದಾರೆ.