ಶಿರಸಿ(SIRSI) : ಹಳೆಯ ಬಂಗಾರದ(OLD GOLD) ಗಟ್ಟಿ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಆರೋಪಿತರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೊರಬ(SORABA) ತಾಲೂಕಿನ ಆನವಟ್ಟಿಯ ನಾಗಪ್ಪ ಕೊರಚರ (71), ಅವಿನಾಶ ಕೊರಚರ (28), ನಿಸ್ಸಾರ ಅಹಮದ್ (26), ಸಂಜೀವ ಕೊರಚರ (27), ಕೃಷ್ಣಪ್ಪ ನಾಯ್ಕ ಶಿಕಾರಿಪುರ 42 ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 7.63 ಲಕ್ಷ ರೂ ಹಣ ಹಾಗೂ 3 ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 4ರಂದು ಶಿರಸಿ ತಾಲೂಕಿನ ಮಳಲಗಾಂವ(MALALAGAM) ಬಳಿ ದರೋಡೆ ನಡೆಸಲಾಗಿತ್ತು. ಕೇರಳದಿಂದ ಬಂದ ಇಬ್ಬರು ಬಂಗಾರ ನೀಡುವುದಾಗಿ ವಂಚಿಸಿ 9.11 ಲಕ್ಷ ರೂ ದರೋಡೆ ಮಾಡಿದ್ದರು. ಈ ಕುರಿತು ಕೇರಳದ(KERALA) ಮಲಪುರಂದ ಸಚಿನ್ ಶಿವಾಜಿ ಗಾಯಕವಾಡ ಅವರು ಎಂಟು ಜನರ ವಿರುದ್ಧ ಬನವಾಸಿ ಪೊಲೀಸ್ ಠಾಣೆ(BANAVASI POLICE STATION)ಯಲ್ಲಿ ದೂರು ನೀಡಿದ್ದರು.
ಘಟನೆ ಮೊದಲು ನಡೆದಿದ್ದೇನೆಂದರೆ ಓರ್ವ ವಿಕಲಚೇತನ ವ್ಯಕ್ತಿ ಬಂಗಾರ ಕೊಡುವುದಾಗಿ ಹೇಳಿ ವಿಶ್ವಾಸದಿಂದ ಮಾತನಾಡಿ ತಿಂಗಳ ಮೊದಲು 800 ಮಿಲಿ ಬಂಗಾರ ನೀಡಿದ್ದ. ಬಳಿಕ ಸಚಿನ್ ತನ್ನ ಊರಿಗೆ ಹೋಗಿ ಪರೀಕ್ಷಿಸಿ ನೋಡಿ ಬಂಗಾರ ಎಂದು ಖಚಿತಗೊಂಡು ಆರೋಪಿತನಿಗೆ ಕರೆ ಮಾಡಿ ಇನ್ನಷ್ಟು ಬಂಗಾರ ಬೇಕು ಎಂದಿದ್ದ. ಆಗ ಆರೋಪಿತ ಶಿರಸಿ-ಹಾನಗಲ್ ರಸ್ತೆ (SIRSI HANGAL ROAD)ಯ ಮಳಲಗಾಂವ ಬಸ್ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದರು.
ಅದರಂತೆ ದಿನಾಂಕ ನಿಗದಿಯಾಗಿ ಆಗಸ್ಟ್ 4 ರಂದು ಬೆಳಗ್ಗೆ 11:45ಕ್ಕೆ ಆರೋಪಿತರು ತಿಳಿಸಿದ ಜಾಗಕ್ಕೆ ಬಂದಾಗ ಬಂಗಾರ ನೀಡುವುದಾಗಿ ನಂಬಿಸಿ ಸಚಿನ್ ಜತೆ ಬಂದ ಮಲಪುರಂದ ವಿಷ್ಣು, ನಾರಾಯಣ ಇಬ್ಬರೂ ಆರೋಪಿತರ ಬಳಿ ಹೋದಾಗ ದಾಳಿ ನಡೆಸಿ ಹೊಡೆದು ಅವರು ತಂದಿದ್ದ 9.11 ಲಕ್ಷ ರೂ. ದರೋಡೆ (ROBBERY) ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಶಿರಸಿ ಪೊಲೀಸರು ಮೂರು ತಂಡಗಳನ್ನಾಗಿ ರಚಿಸಿ ಇದೀಗ ಎಂಟು ಜನರಲ್ಲಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ನಾರಾಯಣ (SP NARAYAN) ಅವರ ಸೂಚನೆಯಂತೆ ಹೆಚ್ಚುವರಿ ಎಸ್‌ಪಿ ಸಿ.ಟಿ. ಜಯಕುಮಾರ, ಎಂ.ಜಗದೀಶ ಮಾರ್ಗದರ್ಶನದಲ್ಲಿ ಕೆ.ಎಲ್. ಗಣೇಶ, ಸಿಪಿಐ ಶಶಿಕಾಂತ ವರ್ಮಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರು, ಸುನೀಲಕುಮಾರ, ಮಹಾಂತಪ್ಪ ಕುಂಬಾರ, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಕರಣದಲ್ಲಿ ಉತ್ತಮ ಕಾರ್ಯ ಮಾಡಿದ ಸಿಬ್ಬಂದಿಗಳಿಗೆ ಎಸ್ಪಿ ನಾರಾಯಣ ಅಭಿನಂದಿಸಿದ್ದಾರೆ.
ಇದನ್ನು ಓದಿ. ಸಿನಿಮಿಯ ರೀತಿಯಲ್ಲಿ ಬಾರೀ ದರೋಡೆ