ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ಗೋವಾ ಸಮುದ್ರ(Goa Sea) ವ್ಯಾಪ್ತಿಯಲ್ಲಿ ತಾಂತ್ರಿಕ ದೋಷದಿಂದ ಮೀನುಗಾರಿಕಾ ಬೋಟ್(Fishing Boat) ಮುಳುಗಿದ ಘಟನೆ ಸಂಭವಿಸಿದ್ದು, ಬೋಟ್‌ನಲ್ಲಿದ್ದ ಕಾರವಾರ(Karwar) ಮೂಲದ 22 ಮಂದಿ ಮೀನುಗಾರರನ್ನ ರಕ್ಷಣೆ(Fishermens Rescue) ಮಾಡಲಾಗಿದೆ.
ಭಾನುವಾರ ಸಂಜೆ ಗೋವಾದ ಬೇತುಲ್(Goa Betul) ಸಮೀಪ ಸಮುದ್ರದಲ್ಲಿ ಸುಮಾರು 20 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಕಾರವಾರದ ಮುದಗಾ ಬಂದರಿನ(Karwar Mudga Port) ದಿನೇಶ್ ಕಾಂಚನ್ ಅವರಿಗೆ ಸೇರಿದ “ಶ್ರೀ ಅಮ್ಮ 33” ಹೆಸರಿನ ಪರ್ಸಿನ್ ಬೋಟ್ ಸಮುದ್ರದಲ್ಲಿ ಮುಳುಗಲು ಆರಂಭಿಸಿತು ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಮುದಗಾ ಬಂದರಿನ(Mudga Port) ನರೇಶ್ ತಾಂಡೇಲ್ ಅವರಿಗೆ ಸೇರಿದ “ಜಲರಾಜ್” ಬೋಟ್ ಕಲಾಶಿಗಳು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಮತ್ತೊಂದು ಬೋಟ್‌ಗೆ ಸ್ಥಳಾಂತರಿಸಿ ದಡಕ್ಕೆ ಕರೆತಂದಿದ್ದಾರೆ.
ಸೋಮವಾರವೂ ರಕ್ಷಣಾ ಕಾರ್ಯಾಚರಣೆ(Rescue Operations) ಮುಂದುವರಿದಿದ್ದು, ಸ್ಥಳೀಯ ಆರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳು(Fishing Boats) ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಸಮುದ್ರದಲ್ಲಿ ಸಿಲುಕಿರುವ ಮುಳುಗಿದ ಬೋಟ್ ಹಾಗೂ ಅದರೊಂದಿಗೆ ಇರುವ ಎರಡು ಬಲೆಗಳನ್ನು ಸುರಕ್ಷಿತವಾಗಿ ಕರಾವಳಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಘಟನೆಯಲ್ಲಿ ಬೋಟ್ ಹಾಗೂ ಮೀನುಗಾರಿಕಾ ಬಲೆಗಳಿಗೆ(Fishing Nets) ಭಾರಿ ಹಾನಿಯಾಗಿದ್ದು, ಸುಮಾರು ಒಂದೂವರೆ ಕೋಟಿ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆಯಿದೆ. ಕಾರವಾರದ ಮುದಗಾ ಬಂದರಿನಿಂದ(Karwar Mudga bunder) ಹೊರಟಿದ್ದ ಸುಮಾರು 16 ಮೀನುಗಾರಿಕಾ ಬೋಟ್‌ಗಳು ರಕ್ಷಣಾ ಹಾಗೂ ಹುಡುಕಾಟ ಕಾರ್ಯಾಚರಣೆಯಲ್ಲಿ(Searching operations) ತೊಡಗಿಕೊಂಡಿವೆ.
ಇದನ್ನು ಓದಿ : ಅಬಕಾರಿ ಅಧಿಕಾರಿ ಹೆಸರಲ್ಲಿ ದರೋಡೆ ಯತ್ನ. ಸಾರ್ವಜನಿಕರು ಸೇರುತ್ತಿದ್ದಂತೆ ಎಸ್ಕೇಪ್.
