ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಶಿರಸಿ(Sirsi) : ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ(Sirsi) ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ(Clash) ಏಳು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಶಿರಸಿ ತಾಲೂಕಿನ(Sirsi Taluku) ತೆರಕನಹಳ್ಳಿಯಲ್ಲಿ ನಡೆದ ಘಟನೆಯಲ್ಲಿ, ಕೆಲವರು ಕಾರು, ಜೀಪ್, ಆಟೋ ಹಾಗೂ ಬೈಕ್ಗಳಲ್ಲಿ ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಬ್ಬಿಣದ ರಾಡ್ ಹಾಗೂ ಪಂಚ್ಗಳಂತಹ ವಸ್ತುಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಲ್ಲಿ ತುಕಾರಾಮ ನಾಯ್ಕ, ಸುನೀಲ ನಾಯ್ಕ, ರೇಖಾ ನಾಯ್ಕ, ಸುಭಾಷ್ ನಾಯ್ಕ, ಕವಿತಾ ನಾಯ್ಕ ಹಾಗೂ ಸುಮನಾ ಸುಭಾಷ್ ನಾಯ್ಕ ಸೇರಿದಂತೆ ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿರುವ ಸಂಕೇತ್ ಮೇಸ್ತ ಸೇರಿದಂತೆ ಹಲವರ ವಿರುದ್ಧ ಆರೋಪ ಕೇಳಿಬಂದಿದೆ.
ತುಕಾರಾಮ ನಾಯ್ಕ ಹಾಗೂ ಸಂಕೇತ್ ಮೇಸ್ತ ಅವರ ಸಂಬಂಧಿ ನಾಗರಾಜ್ ಮೇಸ್ತ ನಡುವೆ ಹಣಕಾಸು ವಿಚಾರವಾಗಿ ಹಿಂದಿನಿಂದಲೂ ವೈಮನಸ್ಸು ಇತ್ತು. ಈ ವಿಚಾರಕ್ಕಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.
ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Sirsi Rural Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ(Police Investigation) ಮುಂದುವರೆಸಿದ್ದಾರೆ.
ಇದನ್ನು ಓದಿ : ಸಮುದ್ರದಲ್ಲಿ ಮುಳುಗಿದ ಬೋಟ್. 22ಮೀನುಗಾರರ ರಕ್ಷಣೆ. ಗೋವಾ ಸಮೀಪ ಘಟನೆ.
