ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news): ಮಂಗಳೂರು(Mangalore) : ರೈಲ್ವೇ ನಿಲ್ದಾಣದ ರಸ್ತೆಯಲ್ಲಿ(Railway Station Road) ಹೈಡ್ರೊವಿಡ್ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನ ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ(South canara District Mulki) ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ(Shivamoga District Sagar) ತಾಲೂಕು ಸುಹಾನ ಬಂಧಿತೆ. ಕುಂದಾಪುರ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ( BCA Student) ಸುಹಾನಾಳನ್ನ ವಶಕ್ಕೆ ಪಡೆದು ಸುಮಾರು 35,00,000. ರೂ ಮೌಲ್ಯದ ಒಂದು ಕೆಜಿ 42 ಗ್ರಾಂ ಹೈಡ್ರೊವಿಡ್ ಗಾಂಜಾ(Hidrovid Gaanja) ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆರೋಪಿತೆಯ ವಿಚಾರಣೆಯಿಂದ ಆಕೆ ಚೆನ್ನೈನಿಂದ(Chennai) ಗಾಂಜಾ ತರಿಸಿ, ಮಂಗಳೂರಿನಲ್ಲಿ(Mangalore) ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ(Mulki Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಪಣಂಬೂರು ACP ತಂಡ(Panamburu ACP Team) ಹಾಗೂ ಮೂಲ್ಕಿ ಪೊಲೀಸರ(Mulki Police) ತಂಡ ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ಸ್ವತ್ತಿನೊಂದಿಗೆ ಆರೋಪಿತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತೆಯ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ (Kavooru Police Station) NDPS ಆ್ಯಕ್ಟ್ ನಂತೆ ಈ ಹಿಂದೆ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : ಮಹಾಗಣಪತಿ ದೇವರಿಗೆ ಮಾವಿನ ಹಣ್ಣಿನ ಅಭಿಷೇಕ.
