ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara  digital news): ಭಟ್ಕಳ(Bhatkal) : ರಾಷ್ಟ್ರೀಯ ಹೆದ್ದಾರಿ-66(NH-66) ತಾಲೂಕಿನ ವೆಂಕ್ಚಾಪುರ ಸೇತುವೆ(Venktapur Bridge) ಸಮೀಪ  ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಗಾಯಗೊಂಡಿದ್ದಾರೆ.

ಸ್ವಿಫ್ಟ್ ಡಿಸೈರ್ ಕಾರು(Swift Desire Car) ಭಟ್ಕಳದಿಂದ ಹೊನ್ನಾವರ(Bhatkal To Honnavar) ಕಡೆಗೆ ತೆರಳುತಿತ್ತು. ಇನ್ನೊಂದು ಕಾರು ಭಟ್ಕಳ ಕಡೆ ಬರುತ್ತಿದ್ದ ವೇಳೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಹಾವೇರಿ ಮೂಲದ(Haveri Native) ಬೀಮಪ್ಪ ಹನುಮಂತಪ್ಪ ಗಣಜೂರು ಅವರ ಸ್ವಿಫ್ಟ್ ಡಿಸೈರ್ ಕಾರು ಹಾಗೂ ದಕ್ಷಿಣ ಕನ್ನಡ(South Canara) ಜಿಲ್ಲೆಯ ಬಂಟ್ವಾಳ ಮೂಲದ(Bantwal Native) ಮಾರುತಿ ಸ್ವಿಫ್ಟ್ ಕಾರಿಗೆ(Swift Car) ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮವಾಗಿ ಕಾರಿನಲ್ಲಿದ್ದ ಮೊಹಮ್ಮದ್ ಮುಶಾಫರ್ (26), ಫೌಜಿಯಾ ಎ., ಮೊಹಮ್ಮದ್ ಅಶ್ರಫ್ (29), ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ (19) ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು   ಹೆದ್ದಾರಿ ಪೊಲೀಸ್‌ ಗಸ್ತು(Highway Petrol) ವಾಹನದಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೀಟ್ ಬೆಲ್ಟ್(Seat Belt) ಧರಿಸಿದ್ದರಿಂದ ಹಾಗೂ ವಾಹನಗಳ ಏರ್‌ಬ್ಯಾಗ್‌ಗಳು ತೆರೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಈ ಸಂಬಂಧ ಭಟ್ಕಳ  ಗ್ರಾಮೀಣ ಠಾಣೆಯಲ್ಲಿ(Bhatkal Rural Station) ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಅಂಕೋಲಾ ಮೂಲದ ಯುವತಿ ಕೊಲೆ ಯತ್ನ ಕೇಸ್. ಮಣಿಪಾಲ ಪೊಲೀಸರಿಂದ ಆರೋಪಿ ಬಂಧನ.