ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾವು ಸೇವೆ ಸಲ್ಲಿಸಿದ ಸ್ಥಾನದಿಂದವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸೇವೆಯನ್ನು ಸಮಾಜಮುಖಿಯಾಗಿ ಉಳಿಸಿಕೊಳ್ಳಲು ತಾಲೂಕಿನ ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ(Tahasildar Nagendra Kolashetty) ಮುಂದಾಗಿದ್ದಾರೆ.
ಭಟ್ಕಳ ತಾಲೂಕಿನ ಐದು ಸರ್ಕಾರಿ ಶಾಲೆಗಳಿಗೆ(Government School) ತಮ್ಮ ವೈಯಕ್ತಿಕ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ವಾಟರ್ ಪ್ಯೂರಿಫೈಯರ್ಗಳನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
ತಾಲೂಕಿನ ಮುಟ್ಟಳ್ಳಿ(Muttalli) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಕುಂಟವಾಣಿ(Kuntawani), ಮುಂಡಳ್ಳಿ(Mundalli), ಗೊರಟೆ(Gorate) ಹಾಗೂ ನೂಝ್ ಸರ್ಕಾರಿ ಶಾಲೆಗಳಿಗೆ(Nooz Government School) ಈ ಪ್ಯೂರಿಫೈಯರ್ಗಳನ್ನು ವಿತರಿಸಲಾಗಿದೆ. ಶಾಲಾ ಮಕ್ಕಳಿಗೆ ಶುದ್ಧ ಹಾಗೂ ಸುರಕ್ಷಿತ(Pure And Saftey) ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮಾದರಿ ಕಾರ್ಯವನ್ನ(Model Work) ಅವರು ಮಾಡಿದ್ದಾರೆ.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಲ್ಲಾಸ್ ನಾಯಕ್ ಮಾತನಾಡಿ, “ಭಟ್ಕಳದಂತಹ ಸೂಕ್ಷ್ಮ ತಾಲೂಕಿನಲ್ಲಿ ಕಡಿಮೆ ಅವಧಿಯಲ್ಲೇ ಎಲ್ಲ ಹಂತದ ನೌಕರರನ್ನು ಸಮನ್ವಯದಿಂದ ಮುನ್ನಡೆಸಿದ ನಾಗೇಂದ್ರ ಕೊಳಶೆಟ್ಟಿ ಅವರ ಆಡಳಿತ ಕೌಶಲ್ಯ ಗಮನಾರ್ಹವಾಗಿದೆ. ವಿವಿಧ ಗಣತಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ನಡೆಸುವಲ್ಲಿ ಅವರು ಅನುಸರಿಸಿದ ಕಾರ್ಯತಂತ್ರ ಎಲ್ಲರಿಗೂ ಮಾದರಿಯಾಗಿದೆ. ಅವರ ವರ್ಗಾವಣೆ ಎಲ್ಲರಿಗೂ ಬೇಸರ ತಂದಿದ್ದು, ಈ ಸಂದರ್ಭದಲ್ಲೂ ತಮ್ಮ ಸ್ವಂತ ಹಣದಲ್ಲಿ ಐದು ಶಾಲೆಗಳಿಗೆ ವಾಟರ್ ಫಿಲ್ಟರ್(Water Filter) ನೀಡಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶಿಕ್ಷಣಕ್ಕೆ(Health And Education) ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ,” ಎಂದರು.
ತಹಶೀಲ್ದಾರರ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು, ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ(SDMC) ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸೇವೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಿರುವ ಅವರ ನಡೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಉದಯ್ ಸೂರ್ವೆ, ಸುರೇಶ್ ಮುರ್ಡೇಶ್ವರ, ಮೋಹನ್ ನಾಯ್ಕ ಹಾಗೂ ಸಹ ಶಿಕ್ಷಕರಾದ ವಿಜಯ ನಾರ್ವೆಕರ್ ಮತ್ತು ಪ್ರಸಾದ್ ಹೆಬ್ಬಾರ್ ಉಪಸ್ಥಿತರಿದ್ದರು.
ಇದನ್ನು ಓದಿ : ಕಡವಾಡದ ಹಳೆ ಸೇತುವೆ ಇನ್ನೂ ನೆನಪು ಮಾತ್ರ. ಮಳೆಗೆ ನದಿಯಲ್ಲಿ ಕುಸಿದು ಬಿದ್ದ ಬ್ರಿಡ್ಜ್.
