ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಳೆದ ಕೆಲ ವರ್ಷಗಳ ಹಿಂದೆ ಮುನ್ನಚ್ಚರಿಕೆಯಾಗಿ ಬಂದ್ ಮಾಡಿದ್ದ ಕಾರವಾರ(Karwar) ತಾಲೂಕಿನ ಕಡವಾಡದ ಸೇತುವೆ(Kadwad Bridge) ಬಾರೀ ಮಳೆಗೆ ಕುಸಿದು ಬಿದ್ದಿದೆ.
ಸೋಮವಾರ ರಾತ್ರಿ ಸೇತುವೆ ಕೆಲ ಭಾಗಗಳು ಕುಸಿದು ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸೇತುವೆ ಮೇಲೆ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.
ಕಾರವಾರದ ಕಾಳಿ ನದಿಯಲ್ಲಿ(Karwar Kali Bridge) ಸುಮಾರು ಆರು ದಶಕಗಳ ಹಿಂದೆ ಸುಂಕೇರಿ ಮತ್ತು ಕಡವಾಡ ಗ್ರಾಮಗಳ(Sunkeri-kadwad Bridge) ನಡುವೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಾಲಾನುಕ್ರಮೇಣ ಸೇತುವೆ ದುರ್ಬಲಗೊಂಡಿದ್ದರಿಂದ ಆತಂಕ ಎದುರಾಗಿತ್ತು. ಸೇತುವೆಯ ಕೆಲ ಕಡೆಗಳಲ್ಲಿ ಅಪಾಯಕಾರಿ ಸ್ಥಿತಿ ಇದ್ದುದರಿಂದ ಪಕ್ಕದಲ್ಲಿ ಹೊಸ ಸೇತುವೆ(New Bridge) ನಿರ್ಮಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣಹೆಗಡೆ(Ramakrishna Hegade) ಅವರಿಂದ ಉದ್ಘಾಟಿಸಿದ್ದರು. ಹಲವು ವರ್ಷಗಳ ಕಾಲ ಕಡವಾಡ ಗ್ರಾಮದ(Kadwad Village) ಜನರ ದೈನಂದಿನ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು. ಕಾಲಕ್ರಮೇಣ ಸೇತುವೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸ್ಥಳೀಯರು ಈ ಸೇತುವೆಯ ಸಮೀಪವೇ ಮೀನುಗಾರಿಕೆ(Fishing) ನಡೆಸುತ್ತಿದ್ದರು. ಮಳೆಗಾಲದಲ್ಲಿ ಸಹ ಇಲ್ಲಿ ಮೀನುಗಾರರು ಹೆಚ್ಚಾಗಿ ಈ ಸೇತುವೆ ಮೇಲಿರುತ್ತಿದ್ದರು. ಆದರೆ ಜೀವನಕ್ಕೆ ಆಸರೆಯಾಗುತ್ತಿದ್ದ ಸೇತುವೆ ಕುಸಿದಿರುವುದು ಸ್ಥಳೀಯರಲ್ಲಿ ದುಃಖಕ್ಕೆ ಕಾರಣವಾಗಿದೆ.
ಹಳೆಯ ಸೇತುವೆಯ(Old Bridge) ಪಕ್ಕದಲ್ಲೇ ಈಗಾಗಲೇ ಹೊಸ ಸೇತುವೆ ಇದ್ದು ಸಾರ್ವಜನಿಕರು(Publics) ಹಾಗೂ ವಾಹನ ಸವಾರರು(Vehicle Raiders) ಎಂದಿನಂತೆ ಓಡಾಡುತ್ತಿದ್ದಾರೆ. ಹಳೆಯ ಸೇತುವೆಯ ಕುಸಿತದಿಂದಾಗಿ ದಿನನಿತ್ಯದ ಓಡಾಟಕ್ಕೆ ಯಾವುದೇ ತೊಂದರೆಯಾಗಿಲ್ಲ.
ಸೇತುವೆ ಕುಸಿದ(Bridge Collapse) ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯ ಮಧ್ಯಭಾಗ ಸಂಪೂರ್ಣವಾಗಿ ಕುಸಿದಿರುವುದರಿಂದ, ಸಾರ್ವಜನಿಕರು ಹಾಗೂ ಮೀನುಗಾರರು ಕುಸಿದ ಸೇತುವೆಯ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕಡವಾಡದ ಹಳೆ ಸೇತುವೆ ಇನ್ನೂ ನೆನಪು(Kadwad Old Bridge Memory) ಮಾತ್ರವಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ಸರಣಿ ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು. ಆಟೋ ಚಾಲಕ ವಶಕ್ಕೆ.
