ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ಉತ್ತರಕನ್ನಡ ಜಿಲ್ಲೆಯ ಜೋಯಿಡಾ(Joida) ತಾಲೂಕಿನ ಜಗಲಬೆಟ್ ಸಮೀಪ ಕಾರವಾರ–ರಾಮನಗರ ರಸ್ತೆಯ(Karwar-Ramanagar Road) ಕೃಷ್ಣ ದೇವಸ್ಥಾನದ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ನಿಯಂತ್ರಣ ತಪ್ಪಿದ ಟಿಪ್ಪರ್ ವಾಹನವು(Tipper) ನಾಲ್ಕು ವಾಹನಗಳಿಗೆ ಢಿಕ್ಕಿಯಾಗಿ ಸರಣಿ ಅಪಘಾತ ನಡೆದಿದೆ. ನಿಸ್ಸಾನ್ ಕಾರು(Car), ಬೊಲೆರೊ(Bolero) ಹಾಗೂ ಬೈಕ್‌ಗೆ(Bike) ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಟಿಪ್ಪರ್ ಚಾಲಕ(Tipper Driver) ಮೃತಪಟ್ಟಿದ್ದಾನೆ. ಕುಮಟಾ ಮೂಲದ(Kumta Native) ಬಾಬು ಮೃತ ಸವಾರ ಎಂದು ಹೇಳಲಾಗಿದೆ. ಘಟನೆಯಲ್ಲಿ ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಗಿದೆ.
ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆ(Hubli KMC Hospital) ಹಾಗೂ ಬೆಳಗಾವಿಯ(Belagavi) ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಪರಿಣಾಮ ಜಗಲಬೆಟ್(Jagalabet) ಸಮೀಪ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಘಟನಾ ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಪೊಲೀಸ್ ಠಾಣಾ(Ramanagara Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ಓದಿ : ಸೇವೆಯ ನೆನಪಿಗಾಗಿ ಸರ್ಕಾರಿ ಶಾಲೆಗಳಿಗೆ ವಾಟರ್ ಪ್ಯೂರಿಫೈಯರ್ ಕೊಡುಗೆಯಾಗಿ ನೀಡಿದ ಅಧಿಕಾರಿ
