ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) : ಎಮ್ಮೆಯೊಂದು(Buffalo) ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅಂಚೆ ಇಲಾಖೆಯ ಉದ್ಯೋಗಿಯೋರ್ವರು(Post Department Employee) ಸಾವನ್ನಪ್ಪಿದ ಘಟನೆ ಕುಳಗಿಯಲ್ಲಿ(Kulagi) ಸಂಭವಿಸಿದೆ.

ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ(Haliyal Murkawada Village) ನಿವಾಸಿ ಉಮೇಶ್ ಭಟ್ (59)  ಮೃತ ದುರ್ದೈವಿಯಾಗಿದ್ದಾರೆ. ಉಮೇಶ ಭಟ್ ಕರ್ತವ್ಯ ಮುಗಿಸಿ ಅಂಬಿಕಾನಗರದಿಂದ(From Ambikanagar) ಸಂಬಂಧಿಕರ‌ ಮನೆಯಿರುವ ಜನತಾ ಕಾಲೋನಿಗೆ(Janata Colony) ಬರುತ್ತಿದ್ದರು.  ಕುಳಗಿಯ ಕನ್ನಡ ಶಾಲೆಯ(Kulagi Kannada School) ಹತ್ತಿರ ಏಕಾಏಕಿ ಎಮ್ಮೆಯೊಂದು ಓಡಿಬಂದು  ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ದ್ವಿಚಕ್ರ ವಾಹನದ ಸವಾರ  ಗಂಭೀರ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಗಾಯಗೊಂಡ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ(Dandeli General Hospital) ಕರೆತಂದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ(Dharwad SDM Hospital) ರವಾನಿಸಲಾಗಿತ್ತು.  ಎಸ್ಡಿಎಂ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಮೇಶ ಭಟ್ 2027ರ ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗುವವರಿದ್ದರು.  ಆಕಸ್ಮಿಕವಾಗಿ ರಸ್ತೆ ಅವಘಡದಿಂದ ಸಾವನ್ನಪ್ಪಿರುವುದು ಶೋಕ ಉಂಟುಮಾಡಿದೆ.

ಇದನ್ನು ಓದಿ : ಟೆಂಟ್ ಶೀಟ್ ತೆಗೆಯುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ದುರ್ಮರಣ.