ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಯುವತಿಯೊಬ್ಬಳನ್ನು  ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ(Sexual Harassment) ನೀಡಲು ಯತ್ನಿಸಿದ ಆರೋಪದಡಿ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.

ಮಾರುಕೇರಿ ನಿವಾಸಿ ಯುವತಿ  ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Bhatkal Rural Police Station)  ನೀಡಿದ ದೂರಿನ ಮೇರೆಗೆ ಕಾರಗದ್ದೆ 2ನೇ ಕ್ರಾಸ್ ನಿವಾಸಿ ಶಾಹೀದ್ ಖಾನ್ ವಿರುದ್ಧ ಪೊಲೀಸರು ಪ್ರಕರಣ(Police Case) ದಾಖಲಿಸಿಕೊಂಡಿದ್ದಾರೆ.

ಆರೋಪಿ ಶಾಹೀದ್ ಕಳೆದ ಕೆಲವು ಸಮಯದಿಂದ ಯುವತಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ, ಈ ಸಂಬಂಧ ಹಲವು ಬಾರಿ ಆಕೆಯೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಜೂನ್ 17ರಂದು ಬೆಳಿಗ್ಗೆ ಭಟ್ಕಳ ನಗರದ ಖಾಸಗಿ ಸೂಪರ್ ಮಾರ್ಕೆಟ್(Super Market) ಹಿಂಭಾಗದಲ್ಲಿರುವ ವಸತಿ ನಿಲಯದ ಬಳಿ ಕಾರಿನಲ್ಲಿ ಬಂದ ಆರೋಪಿ, ಮಾತನಾಡಬೇಕಿದೆ ಎಂದು ಹೇಳಿ ಯುವತಿಯನ್ನು ಹೊರಗೆ ಕರೆಸಿಕೊಂಡಿದ್ದಾನೆ.

ಬಳಿಕ ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕಾರಿನೊಳಗೆ ಕೂರಿಸಿ ವಾಹನದ ಬಾಗಿಲುಗಳನ್ನು ಲಾಕ್ ಮಾಡಿ ಮಾರುಕೇರಿ ಕಡೆಗೆ(Marukeri Side) ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾರು ಮಾರುಕೇರಿ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಕಡಸಲಗದ್ದೆ ಪುರಸಭೆಯ ಕಸ ವಿಲೇವಾರಿ ಘಟಕದ ಸಮೀಪ ತಲುಪಿದ್ದು, ಈ ಸಂದರ್ಭದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ

ಘಟನೆಯ ಕುರಿತು ಯುವತಿ ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Bhatkal Rural Police Station) ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ(Police Investigation) ಮುಂದುವರಿಸಿದ್ದಾರೆ.

ಇದನ್ನು ಓದಿ : ದ್ವಿಚಕ್ರ ವಾಹನಕ್ಕೆ ಎಮ್ಮೆ ಡಿಕ್ಕಿ. ಅಂಚೆ ಇಲಾಖೆ ಉದ್ಯೋಗಿ ಸಾವು.