ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal): ಸಾರ್ವಜನಿಕ ಸ್ಥಳದಲ್ಲಿ ಪುಂಡಾಟಿಕೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದ ಆರೋಪದಡಿ ತಲೆಮರೆಸಿಕೊಂಡಿದ್ದ ಹಳಿಯಾಳದ ಮಂಜುನಾಥ್ ಬೇಕನಿ ಅಲಿಯಾಸ್ ‘ಮಚ್ ಮಂಜು’ನನ್ನು ಹಳಿಯಾಳ ಪೊಲೀಸರು(Haliyal Police) ಬಂಧಿಸಿದ್ದಾರೆ.
ಹಳಿಯಾಳದ ಮೌರ್ಯ ಕ್ಲಬ್ನಲ್ಲಿ(Mourya Club) ಮದ್ಯದ ಅಮಲಿನಲ್ಲಿ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತೊಂದರೆ ನೀಡಿದ್ದ ಆರೋಪ ಮಂಜುನಾಥ್ ಮೇಲಿತ್ತು. ಅಲ್ಲದೇ ಹಲವು ದ್ವಿಚಕ್ರ ವಾಹನಗಳಿಗೆ ಹಾನಿ ಉಂಟುಮಾಡಿದ್ದ. ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ(Attempt Assaulted ) ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಕರ್ನಾಟಕ(Karnataka), ಗೋವಾ(Goa) ಹಾಗೂ ಮಹಾರಾಷ್ಟ್ರ(Maharashtra) ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ(SP) ಸೂಚನೆಯಂತೆ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ದಾಂಡೇಲಿ ಉಪವಿಭಾಗದ(Dandeli Subdivision) ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಾರಪೂರ್ತಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿವಿಧ ರಾಜ್ಯಗಳಲ್ಲಿ ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕೊನೆಗೂ ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಯಲ್ಲಿ(Maharashtra State Sangli) ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಜನ ಪುಂಡಾಟಿಕೆ ಸಂಬಂಧಿಸಿದಂತೆ ಹಳಿಯಾಳ ಪಿಎಸ್ಐ(Haliyal PSI) ಹಾಗೂ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದ ಹಳಿಯಾಳದ ಈ ಪ್ರಕರಣಕ್ಕೆ ಇದೀಗ ತೆರೆ ಬಿದ್ದಿದೆ.
ಇದನ್ನು ಓದಿ : ಭಟ್ಕಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನಲೆ. ಎಡಿಜಿಪಿ, ಐಜಿಪಿ ಭೇಟಿ. ಮಹತ್ವದ ಸಭೆ.
