ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಮುಂಡಗೋಡು (Mundgod) : ಲಂಚಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ(Lokayukta) ಬಲೆಗೆ ಬಿದ್ದ ಘಟನೆ ಮುಂಡಗೋಡು(Mundgod) ಪಟ್ಟಣದಲ್ಲಿ ನಡೆದಿದೆ.

ಮುಂಡಗೋಡ ಹೆಸ್ಕಾಂ ಎಇಇ (AEE)  ಧರ್ಮರಾಜ ಬೆಡಸಗಾಂವ್ 65 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿಯೇ ಲೋಕಾಯುಕ್ತ ಅಧಿಕಾರಿಗಳು(Lokayukta Officer’s) ಬಲೆಗೆ ಕೆಡವಿದ್ದಾರೆ.
ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ  ಲೋಕಾ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.

ಇನ್ನೂ ಕಂದಾಯ ನಿರೀಕ್ಷಕ(Revenue Inspector)  ಬಸವರಾಜ್ ಎಂಬಾತ ಸಹ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ನಾರಾಯಣ ಅರೆಜೊಗಿ ಎಂಬ ವ್ಯಕ್ತಿ ಪಾರ್ಮ್ಹೌಸ್ ಮಾಡಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು ಅನುಮತಿಗೆ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಎಂಬವರು 15ಸಾವಿರ ರೂಪಾಯಿ ಲಂಚ ಕೇಳಿದ್ದರು. ಆದರೆ ಹಣ ಕೊಡಲು ಆಗದೆ ನಾರಾಯಣ ಲೋಕಾಯುಕ್ತ ದೂರು ಸಲ್ಲಿಸಿದ್ದರು. ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ಬಂಧಿಸಿದ್ದಾರೆ. ಧನ್ಯಾ ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿ ಲಂಚದ ಹಣ ಹಾಗೂ ಕಂದಾಯ ನಿರೀಕ್ಷಕನನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಕಾರವಾರ(Karwar) ಹಾಗೂ ಧಾರವಾಡ ಲೋಕಾಯುಕ್ತ(Dharwad Lokayukta) ಅಧಿಕಾರಿಗಳ ಮೂರು ಪ್ರತ್ಯೇಕ ತಂಡದಿಂದ ಇಂದು  ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನು ಓದಿ : ಕುಮಟಾದಲ್ಲಿ ಹೊಟೇಲ್ ಮಾಲೀಕನ ದರ್ಪ. ಅಲೆಮಾರಿ ದಂಪತಿ ಮೇಲೆ ಹಲ್ಲೆ. ಸಾರ್ವಜನಿಕರ ಆಕ್ರೋಶ.