ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ (Kalaginakoppa Village) ನಡೆದ ನಾಡಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿ ವಸಂತ ರಾಯಪ್ಪ ಕೊರವರನನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 23ರಂದು ಬೆಳಿಗ್ಗೆ ಸುಮಾರು 6 ಗಂಟೆ ವೇಳೆಯಲ್ಲಿ ಕಾಳಗಿನಕೊಪ್ಪ ಗ್ರಾಮದಲ್ಲಿ(Kalaginakoppa Village) ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಭಾರೀ ಶಬ್ದ ಕೇಳಿಬಂದಿದ್ದು, ಮಣ್ಣಿನ ಗೋಡೆ(Mud Wall) ಸಂಪೂರ್ಣ ಕುಸಿದಿತ್ತು.
ಘಟನಾ ಸ್ಥಳದಲ್ಲಿ ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳು ಪತ್ತೆಯಾಗಿದ್ದವು. ಬಾಂಬ್ ಸ್ಕ್ವಾಡ್(Bomb Squad) ಸಿಬ್ಬಂದಿಗಳು ಅವುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಬಳಿಕ ಗ್ರಾಮದಲ್ಲಿರುವ ಕೆರೆಯಲ್ಲಿ ಎರಡು ನಾಡಬಾಂಬ್ಗಳು ಪತ್ತೆಯಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ.
ಸ್ಫೋಟದ ಸ್ಥಳದಲ್ಲಿ ಕಾಡುಹಂದಿಯ ಹಲ್ಲು ಕೂಡ ಪತ್ತೆಯಾಗಿದ್ದು, ಪ್ರಾಣಿ ಬೇಟೆಗಾಗಿ ನಾಡಬಾಂಬ್ಗಳನ್ನು ಬಳಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮಾಹಿತಿ ನೀಡಿದ್ದಾರೆ.
ಸ್ಫೋಟದ ಬಳಿಕ ಆರೋಪಿ ವಸಂತ ರಾಯಪ್ಪ ಕುಟುಂಬ ಸಮೇತ ಪರಾರಿಯಾಗಿದ್ದ. ಇದೀಗ ಹುಬ್ಬಳ್ಳಿಯಲ್ಲಿ(Hubli) ಆತನನ್ನು ಬಂಧಿಸಲಾಗಿದ್ದು, ಹಳಿಯಾಳ ಪೊಲೀಸರು(Haliyal Police) ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನು ಓದಿ : ರಾಜ್ಯದ ಸಚಿವರಿಗೆ ಜಿಲ್ಲೆಯ ಉಸ್ತುವಾರಿ. ಯು ಟಿ ಖಾದರ್ ಗೆ ನಾಲ್ಕು ಜಿಲ್ಲೆಯ ಜವಬ್ದಾರಿ.
