ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಬೆಳಗಾವಿ(Belagavi) : ಕೆಎಲ್ಇ ಸೊಸೈಟಿ(KLE Society) ಸಂಸ್ಥೆಯ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ವೈದ್ಯರೊರ್ವರು   ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.

ಡಾ. ದಿನೇಶ್ ಭಟ್ಕಳ್(Dr Dinesh Bhatkal) ಅವರು  ಬೆಳಗಾವಿಯ ಟಿಳಕವಾಡಿಯ(Belagavi Tilakawadi) ಮಂಡೋಳಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂಕೋಲಾ ಮೂಲದವರಾದ ಡಾ. ದಿನೇಶ್(Ankola Native Dr Dinesh) ಅವರು ಹಲವು ವರ್ಷಗಳಿಂದ ಕೆಎಲ್ಇ ಸೊಸೈಟಿ(KLE Society) ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಶ್ವಾಸಕೋಶ ಕ್ಯಾನ್ಸರ್ ನಿಂದ(Lung’s Cancer) ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಳಗಾವಿಗೆ ಬಂದು ಕುಟುಂಬದೊಂದಿಗೆ ನೆಲೆಸಿದ್ದರು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಅವರಿಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

ಆರೋಗ್ಯ ಸಮಸ್ಯೆಯಿಂದ ತೀವ್ರ ಎದೆನೋವು ಅನುಭವಿಸುತ್ತಿದ್ದ ಅವರು  ಆಪ್ತರು ಹಾಗೂ ಸ್ನೇಹಿತರೊಂದಿಗೆ  ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ. ಶುಕ್ರವಾರ ಬೆಳಗ್ಗೆ ಸಹಿಸಲಾಗದಷ್ಟು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ತಮ್ಮ ವೈಯಕ್ತಿಕ ರಿವಾಲ್ವಾರ್ ಬಳಸಿ ಮನೆಯ ಗ್ಯಾಲರಿಯಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾ. ದಿನೇಶ್ ಅವರು ತಾವು ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಡಾ ಪ್ರಭಾಕರ್ ಕೋರೆ(Prabhakar Kore)  ಸೇರಿದಂತೆ ತಮ್ಮ ಹಿತೈಷಿಗಳಿಗೆ ವಾಟ್ಸಪ್ ಸಂದೇಶ(WhatsApp Message) ಕಳುಹಿಸಿದ್ದು, “ನನಗೆ ನೀವು ಇಷ್ಟು ವರ್ಷ ಸಹಾಯ ಮಾಡಿದ್ದೀರಿ. ಆದರೆ ತೀವ್ರ ಎದೆನೋವನ್ನು ಸಹಿಸಲಾಗುತ್ತಿಲ್ಲ. ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ತಿಳಿಸಿದ್ದಾರೆ. ಘಟನೆಯ   ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿರಿಯ ವೈದ್ಯರೋರ್ವರ  ದುರಂತ ಸಾವು ಅವರನ್ನು ಕಂಡ  ವೈದ್ಯಕೀಯ ವಲಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ರೋಗಿಗಳ ದುಃಖಕ್ಕೆ ಕಾರಣವಾಗಿದೆ.  ಎಲ್ಲೆಡೆ ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ : ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್. ಕಚೇರಿಯೊಳಗೆ ನುಗ್ಗಿ ಗುಂಡಿನ ದಾಳಿ.