ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ (Joida) : ಉತ್ತರ ಕನ್ನಡ (Uttarkannada) ಜಿಲ್ಲೆಯ ಜೋಯಿಡಾ ತಾಲೂಕಿನ ಹನೋಲಿ ಕ್ರಾಸ್ ಸಮೀಪದ ರಸ್ತೆಯಲ್ಲಿ ಹಿಂಡು ಹಿಂಡಾಗಿ ಕಾಡುಕೋಣಗಳು(Indian Bison) ಕಾಣಿಸಿಕೊಂಡಿದ್ದು, ಈ ದೃಶ್ಯ ವಾಹನ ಸವಾರರು ಹಾಗೂ ಪ್ರವಾಸಿಗರ(Tourist) ಗಮನ ಸೆಳೆದಿದೆ.
ಯಾವುದೇ ಆತಂಕವಿಲ್ಲದೆ ರಸ್ತೆ ಮಾರ್ಗದಲ್ಲೇ ಓಡಾಡುತ್ತಿದ್ದ ಕಾಡುಕೋಣಗಳನ್ನು(Bison) ಕಂಡ ವಾಹನ ಸವಾರರು ತಮ್ಮ ಮೊಬೈಲ್ಗಳಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೆಲಕಾಲ ರಸ್ತೆ ಬದಿಯಲ್ಲಿ ಹಾಗೂ ರಸ್ತೆಯ ಮೇಲೆಯೇ ಸಂಚರಿಸಿದ ಕಾಡುಕೋಣಗಳ ಹಿಂಡು ಬಳಿಕ ಅರಣ್ಯದತ್ತ ತೆರಳಿದೆ.
ಮಳೆಗಾಲದ(Rain) ಹಿನ್ನೆಲೆಯಲ್ಲಿ ಕಾಡು ಪ್ರದೇಶಗಳಲ್ಲಿ ಪ್ರಾಣಿಗಳ ಸಂಚಾರ ಹೆಚ್ಚಾಗುತ್ತಿರುವ ಕಾರಣ, ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ(Forest Department) ಮನವಿ ಮಾಡಿದೆ. ಕಾಡುಪ್ರಾಣಿಗಳನ್ನು(Wild Animals) ಕಂಡ ಸಂದರ್ಭದಲ್ಲಿ ಅವುಗಳಿಗೆ ಕಿರಿಕಿರಿ ಉಂಟುಮಾಡದೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.
