ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಅಳಿವೆಯಲ್ಲಿ ಮೀನುಗಾರಿಕಾ ಬೋಟ್‌ವೊಂದು(Fishing Boat) ಮುಳುಗಿದ ಘಟನೆ ತದಡಿ ಬಂದರು ಸಮೀಪ ನಡೆದಿದೆ.
ಉತ್ತರಕನ್ನಡ(Uttarkannada) ಜಿಲ್ಲೆಯ ಕುಮಟಾ(Kumta) ತಾಲೂಕಿನ ತದಡಿ ಬಂದರಿನಲ್ಲಿ(Tadri Boat) ಶ್ರೀದೇವಿ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಿದೆ. ಈ ಬೋಟ್ ಮೋಹನ್ ಕಿಮಾನಿ ಎಂಬುವವರ ಸೇರಿದ್ದಾಗಿದೆ.
ಮೀಮುಗಾರಿಕೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಬೋಟ್‌ನಲ್ಲಿ ನಾಲ್ವರು ಮೀನುಗಾರರಿದ್ದು, ಅಪಾಯದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರ ಮೀನುಗಾರರು ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ(Rescue). ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತದಡಿ ಬಂದರಿನ(Tadri Port) ಅಳಿವೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಬೋಟ್‌ಗಳು ಪದೇಪದೇ ಮುಳುಗುವ ಹಾಗೂ ಹಾನಿಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಬೋಟ್ ಮುಳುಗಡೆಯಿಂದ(Boat Sink) ಸುಮಾರು 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬಂದರಿನ ಅಳಿವೆಯಲ್ಲಿರುವ ಹೂಳು ತೆರವುಗೊಳಿಸಿ, ಬೋಟ್‌ಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮೀನುಗಾರರು(Fishermans) ಒತ್ತಾಯಿಸಿದ್ದಾರೆ.
