ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಸ್ವಾತಂತ್ರ್ಯೋತ್ಸವ (Independence) ಸಮಾರಂಭದಲ್ಲಿ ಭಾಷಣ ಓದಲು ಉತ್ತರಕನ್ನಡ(Uttarkannada) ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ(District Incharge Minister Laxman Savadi) ಪರದಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ(Karwar) ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ(Police Pared Ground) ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಸಚಿವರಿಗೆ ಭಾಷಣ ಓದಲು ತೊಂದರೆಯಾಯಿತು. ಭಾಷಣ ಆರಂಭಿಸಿದ ಕೆಲ ಹೊತ್ತಿನಲ್ಲೇ ವೇದಿಕೆಯಲ್ಲಿ ಕತ್ತಲು(Dark) ಆವರಿಸಿದ್ದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಮೊಬೈಲ್‌ನ ಟಾರ್ಚ್(Mobile Torch) ಬೆಳಕಿನಲ್ಲೇ ಸಚಿವ ಲಕ್ಷ್ಮಣ ಸವದಿ ಭಾಷಣ ಓದಲು ಮುಂದಾದರು. ಬಳಿಕ ಪೊಲೀಸರು ಡಯಾಸ್ ಅನ್ನು ಹಿಂದಕ್ಕೆ ಸರಿಸಿ ಬೆಳಕು ಬೀಳುವ ಕಡೆಗಳಲ್ಲಿ ವ್ಯವಸ್ಥೆ ಮಾಡಿದರು.
ನಂತರ ಸಚಿವ ಲಕ್ಷ್ಮಣ ಸವದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣವನ್ನು(Independence Speche) ಮುಂದುವರಿಸಿದರು. ವೇದಿಕೆಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
Minister Torch Speche/ ಕಾರವಾರದಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಓದಲು ಸಚಿವ ಲಕ್ಷ್ಮಣ ಸವದಿ ಪರದಾಟ
