ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ ಚಾಲಕ ಸಾವನ್ನಪ್ಪಿದ ಘಟನೆ ತಾಲೂಕಿನ ಉಸೋಡಾದಲ್ಲಿ(Usoda) ನಡೆದಿದೆ.
ಗಣೇಶಗುಡಿಯಿಂದ ದಾಂಡೇಲಿಗೆ(Ganeshagudi to Dandeli) ಬರುತ್ತಿದ್ದ ಕೆಪಿಸಿ ಉದ್ಯೋಗಿ(KPC Employee) ಮಲ್ಲಿಕಾರ್ಜುನ ರಾವ್ (40) ಮೃತ ದುರ್ದೈವಿಯಾಗಿದ್ದಾರೆ.
ತಮ್ಮ ಪತ್ನಿಯನ್ನು ಕರೆದುಕೊಂಡು ಬರಲು ಮಲ್ಲಿಕಾರ್ಜುನ ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕೆಪಿಸಿ ನೌಕರರು(KPC Employees) ಮಲ್ಲಿಕಾರ್ಜುನ್ ರಾವ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮಲ್ಲಿಕಾರ್ಜುನ್ ರಾವ್ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಪಿಸಿ ಅಧಿಕಾರಿಗಳು ಸಿಬ್ಬಂದಿಗಳು, ವಕೀಲರು, ಅವೇಡಾ ಗ್ರಾ.ಪಂ ಮಾಜಿ ಅಧ್ಯಕ್ಷ ಅರುಣ್ ಭಗವತಿರಾಜ್ ಹಾಗೂ ಮಾಜಿ ಗ್ರಾ.ಪಂ ಸದಸ್ಯರು ಮತ್ತು ಗಣೇಶಗುಡಿ ಹಾಗೂ ದಾಂಡೇಲಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಅವರ ನಿಧನಕ್ಕೆ ವ್ಯಾಪಕ ಕಂಬನಿ ವ್ಯಕ್ತವಾಗಿವೆ.
