ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕುಮಟಾ(Kumta) : ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತಾಲೂಕಿನ ವಾಲಗಳ್ಳಿಯಲ್ಲಿ(Valgalli) ಸಂಭವಿಸಿದೆ.

ಪ್ರಶಾಂತ ಕೇಶವ ಮುಕ್ರಿ (18) ಮೃತ ವಿದ್ಯಾರ್ಥಿಯಾಗಿದ್ದಾನೆ. ಈತ ಕುಮಟಾ ತಾಲೂಕಿನ ಹೆಗಡೆ ಗ್ರಾಮದ(kumta taluku hegade village) ಗುನಗನಕೊಪ್ಪದ ನಿವಾಸಿ. ಮೂವರು ಸ್ನೇಹಿತರು ಸೇರಿ ಹೆಗಡೆಯಿಂದ ವಾಲಗಳ್ಳಿಯ ಜಡ್ಡಿಕೆರೆಯಲ್ಲಿ(Jaddikere) ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ.
ಮೂವರು ಸೇರಿ ಕೆರೆಯಲ್ಲಿ ಈಜುವ ವೇಳೆ ಪ್ರಶಾಂತ ಮುಕ್ರಿ ಮುಳುಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ತೆರಳಿ ಕೆರೆಯಲ್ಲಿ ಮುಳುಗಡೆಯಾಗಿರುವ ವಿದ್ಯಾರ್ಥಿಗಾಗಿ ಹುಡುಕಾಟ(Searching) ನಡೆಸಿದ್ದಾರೆ. ಇನ್ನೂ ಕುಮಟಾ ಪೊಲೀಸರಿಗೆ(Kumta Police) ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೇ ಪಿಎಸ್ಐ ಅಲ್ಲಂ ಭಾಷಾ(PSI Allam Bhasha) ಕೆರೆಗೆ ಜಿಗಿದು ಮುಳಗಿದಾತನಿಗೆ ಶೋಧ ನಡೆಸಿದರು.
ಕೆಲ ಹೊತ್ತಿನಲ್ಲಿ ಮೃತ ದೇಹವನ್ನು ಪತ್ತೆ ಹಚ್ಚುವಲ್ಲಿ ಪಿಎಸ್ಐ ಭಾಷಾ ಯಶಸ್ವಿಯಾಗಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ(Kumta Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.