ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಅಂಕೋಲಾ (Ankola) : ಈದ್ ಮಿಲಾದ್ ಮೆರವಣಿಗೆಯಲ್ಲಿ(Eid Milad Procession) ಪ್ಯಾಲೆಸ್ತೀನ್ ಧ್ವಜ(Palestine Flag) ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ಮೇಲೆ ಪ್ರಕರಣ ದಾಖಲಾಗಿದೆ.

ಮೊಹಮ್ಮದ್‌ ರಜಾ ಶೇಖ್ (29) ಎಂಬಾತನ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಈತ ಅಂಕೋಲಾ(Ankola) ಪಟ್ಟಣದ ವಿಠಲ್ ಘಾಟ್ ನಿವಾಸಿಯಾಗಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ(Uttarkannada District Ankola) ಪಟ್ಟಣದಲ್ಲಿ ಬುಧವಾರ ನಡೆದ ಈದ್ ಮಿಲಾದ್(Eid Milad) ಮೆರವಣಿಗೆಯಲ್ಲಿ ಮೊಹಮದ್ ರಜಾ ಶೇಖ್(29) ಎಂಬಾತ ಪಟ್ಟಣದ ಕೇಣಿ ಕ್ರಾಸ್-ಬಂಡಿ ಬಜಾರ್ ರಸ್ತೆ ಸಮೀಪ ಪ್ಯಾಲೇಸ್ತೀನ್ ಧ್ವಜ ಹಾರಾಟ ನಡಸುತ್ತಿದ್ದ. ತಕ್ಷಣ ಅಂಕೋಲಾ ಪೊಲೀಸರು(Ankola Police) ಸ್ಥಳಕ್ಕೆ ಧಾವಿಸಿ ಧ್ವಜ ವಶಪಡಿಸಿಕೊಂಡಿದ್ದರು.

ಈ ವೇಳೆ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮೆರವಣಿಗೆ ಮುಂದಕ್ಕೆ ಸಾಗಿತ್ತು. ಶಾಂತಿ ಕದಡುವ ಉದ್ಧೇಶದಿಂದ ಈ ರೀತಿ ಮಾಡಿದ್ದಾನೆಂಬ ಚರ್ಚೆ ವ್ಯಕ್ತವಾಗಿತ್ತು. ಹೀಗಾಗಿ BNS ಕಲಂ‌ 196(1)(B) ಅಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಅಂಕೋಲಾ ಪೊಲೀಸರು ತನಿಖೆ ನಡೆಸಿದ್ದಾರೆ.