ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar): ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ(Ankola) ಮತ್ತು ಕುಮಟಾ(Kumta), ಭಟ್ಕಳ(Bhatkal), ಶಿರಸಿ(Sirsi), ಯಲ್ಲಾಪುರ(Yallapur) ಹಾಗೂ ಹಳಿಯಾಳ(Haliyal) ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ನಡೆದ ‘ಪ್ರಜಾಸೇವೆ’ ಆಂದೋಲನ(Praja Seve Andolana) ಸಭೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 1,383 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳು ಪ್ರಸ್ತುತ ಪರಿಶೀಲನೆ ಹಾಗೂ ವಿಲೇವಾರಿ ಹಂತದಲ್ಲಿವೆ. ​ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್(RDPR) ಇಲಾಖೆಗೆ ಸಂಬoಧಿಸಿದoತೆ ಗರಿಷ್ಠ 451 ಅರ್ಜಿಗಳು ಸಲ್ಲಿಕೆಯಾಗಿದ್ದು, ​ಕಂದಾಯ(REVENUE) ಇಲಾಖೆಗೆ 270, ​ನಗರಾಭಿವೃದ್ಧಿ ಇಲಾಖೆಗೆ 135, ​ವಸತಿ ಇಲಾಖೆಗೆ 128, ​ಆಹಾರ ಮತ್ತು ನಾಗರಿಕ ಸರಬರಾಜು(Food and Civil) ಇಲಾಖೆಗೆ 102 ಅರ್ಜಿಗಳು ಬಂದಿವೆ.

ಹೆಸ್ಕಾo ಇಲಾಖೆಗೆ 51, ಲೋಕೋಪಯೋಗಿ ಇಲಾಖೆಗೆ 50, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 46 ಹಾಗೂ ಸಾರಿಗೆ ಇಲಾಖೆಗೆ 30 ಅರ್ಜಿಗಳು ಸಲ್ಲಿಕೆಯಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 27, ಸಣ್ಣ ನೀರಾವರಿ ಇಲಾಖೆಗೆ 13, ಕಾರ್ಮಿಕ ಇಲಾಖೆಗೆ 12, ಕೌಶಲ್ಯಾಭಿವೃದ್ಧಿ ಇಲಾಖೆಗೆ 12, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 10 ಅರ್ಜಿಗಳು ಸಲ್ಲಿಕೆಯಾಗಿವೆ.

​ಅಂತೆಯೇ, ಅರಣ್ಯ ಇಲಾಖೆಗೆ 7, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 6, ಡಿಪಿಎಆರ್ (ಇ-ಆಡಳಿತ) ಹಾಗೂ ಜಲಸಂಪನ್ಮೂಲ ಇಲಾಖೆಗೆ ತಲಾ 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4, ಕೃಷಿ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ತಲಾ 3 ಅರ್ಜಿಗಳು ಬಂದಿವೆ. ಸಹಕಾರ, ಮೂಲಸೌಕರ್ಯ, ಸಮಾಜ ಕಲ್ಯಾಣ, ಹಣಕಾಸು, ಗೃಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗೆ ತಲಾ 2 ಅರ್ಜಿಗಳು ಮತ್ತು ಐಟಿ-ಬಿಟಿ ಇಲಾಖೆಗೆ 1 ಅರ್ಜಿ ಸಲ್ಲಿಕೆಯಾಗಿದೆ.

ಸಲ್ಲಿಕೆಯಾಗಿರುವ ಎಲ್ಲಾ 1,383 ಅರ್ಜಿಗಳ ಪರಿಶೀಲನೆ ಚಾಲನೆಯಲ್ಲಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾಲಮಿತಿಯಲ್ಲಿ ಇವುಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶನಿವಾರ ಜರುಗಿದ ಈ ಪ್ರಜಾ ಸೇವಾ ಅಭಿಯಾನವು ಪ್ರಮುಖ ಪಾತ್ರ ವಹಿಸಲಿದೆ.