ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಶಿರಸಿ(Sirsi): 2026-27ನೇ ಸಾಲಿನ ಶಿರಸಿ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜು ಸತತ 18ನೇ ಬಾರಿ ಸಮಗ್ರ ಚಾಂಪಿಯನ್‌ಶಿಪ್ ಪಡೆದು ದಾಖಲೆ ಬರೆದಿದೆ.

ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾರವಾರ ಹಾಗೂ ಶ್ರೀ ವೆಂಕಟರಾವ್ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟವು ಇತ್ತೀಚಿಗೆ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಅತಿ ಹೆಚ್ಚು ಸ್ಪರ್ಧೆಗಳಲ್ಲಿ ವಿಜೇತರಾಗಿ ಈ ಸಾಧನೆ ಮಾಡಿದ್ದಾರೆ. ಜೇತ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ. ನಾಯ್ಕ, ಸರ್ವ ಸದಸ್ಯರು, ಪ್ರಾಚಾರ್ಯ ಕೆ.ಹೆಚ್. ಸುಬ್ರಹ್ಮಣ್ಯ, ಕ್ರೀಡಾ ಸಂಚಾಲಕಿ ಶ್ರೀಮತಿ ರತ್ನಮ್ಮ, ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

*ವೈಯಕ್ತಿಕ ವಿಭಾಗದಲ್ಲಿ ವಿಜೇತರು:* ಬಾಲಕಿಯರ ವಿಭಾಗ:*
– *ಬವ್ಯಾ ಜಿ. ಬಟ್ಟಿ:* 3000 ಮೀ ಓಟ ಪ್ರಥಮ, 1500 ಮೀ ಓಟ ಪ್ರಥಮ, 4×400 ಮೀ ರಿಲೇ ಪ್ರಥಮ
– *ಪೂರ್ವಿ ಆರ್. ನಾಯ್ಕ:* 400 ಮೀ ಹರ್ಡಲ್ಸ್ ಪ್ರಥಮ, 4×400 ಮೀ ರಿಲೇ ಪ್ರಥಮ,
– *ಕುಸುಮಾ ಮುಕ್ರಿ:* 3000 ಮೀ ದ್ವಿತೀಯ, 1500 ಮೀ ದ್ವಿತೀಯ, 4×400 ಮೀ ರಿಲೇ ಪ್ರಥಮ
– *ಚೈತ್ರಾ ಟಿ. ಗೌಡ:* ಜಾವೆಲಿನ್ ಪ್ರಥಮ, ಟ್ರಿಪಲ್ ಜಂಪ್ ದ್ವಿತೀಯ
– *ಸೃಷ್ಟಿ ಎಂ. ನಾಯ್ಕ:* ಪೋಲ್ ವಾಲ್ಟ್ ಪ್ರಥಮ
– *ದಿಶಾ ಗಡನಾಡ ಶೆಟ್ಟಿ:* ಚೆಸ್ ಸ್ಪರ್ಧೆಯಲ್ಲಿ ಪ್ರಥಮ

*ಬಾಲಕರ ವಿಭಾಗ:*
– *ಸುಮಂತ್ ಎಂ. ಗೌಡ:* ಪೋಲ್ ವಾಲ್ಟ್ ಪ್ರಥಮ, ಟ್ರಿಪಲ್ ಜಂಪ್ ಪ್ರಥಮ,
– *ಮನೀಷ್ ಆರ್. ನಾಯ್ಕ:* ಎತ್ತರ ಜಿಗಿತ ಪ್ರಥಮ
– *ಆದರ್ಶ್ ಕೆ. ಗೌಡ:* ಹ್ಯಾಮರ್ ಥ್ರೋ ಪ್ರಥಮ
– *ಭುವನ್ ಎಂ. ನಾಯ್ಕ:* 5000 ಮೀ ನಡಿಗೆ ಪ್ರಥಮ

*ಗುಂಪು ಆಟಗಳಲ್ಲಿ:*ಬಾಲಕಿಯರು:* *ವಾಲಿಬಾಲ್ ಪ್ರಥಮ, ಖೋ-ಖೋ ಪ್ರಥಮ, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಟೆನ್ನಿಕಾಯ್ಟ್ ದ್ವಿತೀಯ.* ಟೆನ್ನಿಕಾಯ್ಟ್ ನಲ್ಲಿ ಅಂಕಿತಾ ಲಮಾಣಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

*ಬಾಲಕರು:* *ಖೋ-ಖೋ ಪ್ರಥಮ, ವಾಲಿಬಾಲ್ ಪ್ರಥಮ, ಟೆನ್ನಿಕಾಯ್ಟ್ ದ್ವಿತೀಯ, ಥ್ರೋಬಾಲ್ ದ್ವಿತೀಯ.*

ಥ್ರೋಬಾಲ್ ನಲ್ಲಿ ಆದರ್ಶ ಡಿ. ನಾಯ್ಕ, ಅಶ್ವತ್ ಆರ್. ನಾಯ್ಕ, ಪ್ರೀತಂ ಆರ್, ಟೆನ್ನಿಕಾಯ್ಟ್ ನಲ್ಲಿ ಭರತ್ ನಾಯ್ಕ, ಪವನ್ ಕೆ. ಹೆಗಡೆ, ಹರೀಶ್ ಗೌಡ, ದಯಾನಂದ ಗೌಡ ಸೇರಿದಂತೆ ಹಲವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.