ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta): ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17ರವರೆಗೆ ನಡೆಯುತ್ತಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಬದಲಾವಣೆ ಯ ಕಥೆ ಕಾರ್ಯಕ್ರಮದ ರಾಜ್ಯ ಉಸ್ತುವಾರಿಗಳಾಗಿ ಉತ್ತರ ಕನ್ನಡದ(Uttarkannada) ಪ್ರೊ ಎಂ ಜಿ ಭಟ್ ನೇಮಕವಾಗಿದ್ದಾರೆ.
ಪ್ರಧಾನ ಮಂತ್ರಿ ಮೋದಿಜಿಯವರ(PM Modiji) 25 ವರ್ಷಗಳ ಮುಖ್ಯಮಂತ್ರಿಗಳಾಗಿ ಮತ್ತು ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿರುವ ಈ ಸಂದರ್ಭದಲ್ಲಿ ಸಪ್ಟೆಂಬರ್ 17 ರಿಂದ ಅಕ್ಟೋಬರ್ 17ರ ವರೆಗೆ ಭಾರತೀಯ ಜನತಾ ಪಕ್ಷದಿಂದ ಸೇವಾ ಸಂಕಲ್ಪ ಎಂಬ ಹೆಸರಿನಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅಂತಹ ಕಾರ್ಯಕ್ರಮಗಳಲ್ಲಿ ಬದಲಾವಣೆಯ ಕಥೆ ಎಂಬ ವಿಭಾಗದ ರಾಜ್ಯ ಉಸ್ತುವಾರಿಗಳಾಗಿ ಕೆಎಸ್ ನವೀನ್ ವಿಧಾನ ಪರಿಷತ್ ಸದಸ್ಯರು ಶಶಿಧರ್ ಹಾಗೂ ಎಂ ಜಿ ಭಟ್ ನೇಮಕವಾಗಿದ್ದಾರೆ.
ಎಂಜಿ ಭಟ್ ಇವರು ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಶಿಕ್ಷಣ ಪ್ರಕೋಷ್ಠ ದ ರಾಜ್ಯ ಸಹ ಸಂಚಾಲಕರಾಗಿಯೂ ಈ ಹಿಂದೆ ನೇಮಕವಾಗಿದ್ದನ್ನು ನೆನಪಿಸಿಕೊಳ್ಳಬಹುದು. ಇವರ ಅವಧಿಯಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮವು ರಾಜ್ಯದ್ಯಂತ 250ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆದಿದ್ದು ಒಂದು ದಾಖಲೆಯಾಗಿದೆ. ಅಲ್ಲದೆ ರಾಜ್ಯದ ಬಿಜೆಪಿಯ ಎಲ್ಲಾ ವಿಧಾನಪರಿಷತ್ ಸದಸ್ಯರುಗಳನ್ನು ಒಂದೆಡೆ ಸೇರಿಸಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನ ಪರಿಹರಿಸುವ ಬಗ್ಗೆ ಚರ್ಚಿಸಿ ಹೋರಾಟ ಕೈಗೊಂಡಿದ್ದು ಕೂಡ ಒಂದು ವಿಶೇಷವಾಗಿದೆ.
9 ವಿಶ್ವವಿದ್ಯಾನಿಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಾಗ ಅದರ ವಿರುದ್ಧ ಹೋರಾಟ ಮಾಡಿದ್ದು ಅಲ್ಲದೆ ರಾಜ್ಯಪಾಲರಿಗೆ ನಿಯೋಗ ತೆಗೆದುಕೊಂಡು ಹೋಗಿ ಮನವಿಯನ್ನು ಮಾಡಲಾಗಿತ್ತು. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತು ಹಲವಾರು ಹೋರಾಟಗಳನ್ನ ಇವರು ಜನಪರ ಹೋರಾಟ ವೇದಿಕೆ ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿ,ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ರಾಜ್ಯೋತ್ಸವ ಕಾರ್ಯಕ್ರಮ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಲ್ಲದೆ ವಿವಿಧ ಕಾಲೇಜುಗಳಲ್ಲಿ ಶಿಕ್ಷಕರಿಗೆ ಬೋಧನಾ ವಿಧಾನ ಮತ್ತು ಪಂಚಮುಖಿ ಶಿಕ್ಷಣಗಳ ಬಗ್ಗೆ ಹಲವಾರು ಅವಧಿಗಳನ್ನು ಕೂಡ ತೆಗೆದುಕೊಂಡಿದ್ದಾರೆ, ಹಾಗೂ ತೆಗೆದುಕೊಳ್ಳುತ್ತಲೂ ಇದ್ದಾರೆ.
ಪ್ರಸ್ತುತ ಎಮ್ ಜಿ ಭಟ್ ರವರು ಪ್ರಗತಿ ಶಿಕ್ಷಣ ಸಮೂಹ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾಗಿಯೂ ಹಾಗೂ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿಯು ಕೆಲಸ ಮಾಡುತ್ತಿದ್ದು ಇದುವರೆಗೂ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದಿಂದ ತಮ್ಮದೇ ಚಾಪನ್ನ ಮೂಡಿಸಿದ್ದಾರೆ. ಇಂತಹ ಬಹುಮುಖಿ ವ್ಯಕ್ತಿತ್ವದ ಎಂಜಿ ಭಟ್ ರವರಿಗೆ ಇಂತಹ ದೊಡ್ಡ ಜವಾಬ್ದಾರಿ ಬಂದಿದ್ದು ಪಕ್ಷದ ಬಹುತೇಕ ಕಾರ್ಯಕರ್ತರುಗಳು ಹಾಗೂ ಅವರ ಅಭಿಮಾನಿಗಳು ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.