ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar):ಉತ್ತರ ಕನ್ನಡ(Uttarkannada) ಜಿಲ್ಲೆಯಲ್ಲಿ ಗಣೇಶ ಚತುರ್ಥಿಯ(Ganesh Chaturthi) ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾಧಿಗಳು, ಮಹಿಳೆಯರು ಆಗಮಿಸುವುದರಿಂದ , ಈ ಸಮಯದಲ್ಲಿ ಕೆಲವರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ತೊಂದರೆಯನ್ನು0ಟು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ
ಸಾಧ್ಯತೆಯಿರುವುದರಿಂದ , ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲೆಯ ವಿವಿಧೆಡೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ(Liquor Baned) ಆದೇಶಿಸಲಾಗಿದೆ.

ಭಟ್ಕಳ(Bhatkal) ಶಹರ ವ್ಯಾಪ್ತಿಯಲ್ಲಿ ಸೆ.16 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.14 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಮುರ್ಡೇಶ್ವರ(Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.24 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಮಂಕಿ(Manki) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.16 ರ ಬೆಳಗ್ಗೆ 6 ಗಂಟೆಯಿಂದ 48 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಹೊನ್ನಾವರ(Honnavar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಕುಮಟಾ(Kumta) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಗೋಕರ್ಣ(Gokarn) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.17 ರ ಬೆಳಗ್ಗೆ 6 ಗಂಟೆಯಿಂದ 48 ಗಂಟೆಯವರೆಗೆ ನಿಷೇಧಿಸಲಾಗಿದೆ.

ಕಾರವಾರ(Karwar) ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಮಲ್ಲಾಪುರ(Mallapur) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ ಬ್ಯಾನ್ ಮಾಡಲಾಗಿದೆ.

ಅಂಕೋಲಾ(Ankola) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.15 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ,
ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ ಸೆ.25 ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಿದೆ.

ಶಿರಸಿ(Sirsi) ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ ಸೆ.20 ರ ಬೆಳಗ್ಗೆ 6 ಗಂಟೆಯವರೆಗೆ, ಸೆ.23 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸಿದ್ದಾಪುರ(Siddapur) ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ ಸೆ.21 ಬೆಳಗ್ಗೆ 6 ಗಂಟೆಯವರೆಗೆ, ಮುಂಡಗೋಡ(Mundgod) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.26 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಯಲ್ಲಾಪುರ ಪಟ್ಟಣ, ಮಂಚಿಕೇರಿ , ಕಿರವತ್ತಿಯಲ್ಲಿ .ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ , ಸೆ.24 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ ನಿಷೇಧ ಮಾಡಲಾಗಿದೆ.

ದಾಂಡೇಲಿ(Dandeli) ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಹಳಿಯಾಳ(Haliyal) ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಜೋಯಿಡಾ(Joida) ತಾಲೂಕು ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.22 ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿಂದ 48 ಗಂಟೆಯವರೆಗೆ , ರಾಮನಗರ(Ramanagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ , ವೈನ್ ಶಾಪ್ ಮತ್ತು ಬಾರ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ ಲಕ್ಷ್ಮೀಪ್ರಿಯಾ(DC K Lakshmipriya) ಆದೇಶ ಹೊರಡಿಸಿದ್ದಾರೆ.