ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ: ಇಲ್ಲಿನ ಬೈತಖೋಲ್ ನಲ್ಲಿ(Baitkol) ಗಣೇಶ ಚತುರ್ಥಿ(Ganesh Chaturthi) ಸಂಭ್ರಮದ ನಡುವೆ ವಿಶೇಷ ಆಕರ್ಷಣೆಯೊಂದು ಸಾರ್ವಜನಿಕರ ಗಮನ ಸೆಳೆದಿದೆ.

ಯುವ ಮೀನುಗಾರರ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರ ಮೂಲ ನಿವಾಸ ದಾಜಿ ಹರಿಕಂತ್ರ ಅವರ ಮನೆಯಲ್ಲಿ ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಗಣೇಶ ಮೂರ್ತಿಗೆ(Ganesha Idol) ಬರೋಬ್ಬರಿ 25 ಕೆಜಿ ತೂಕದ ಬೃಹತ್ ಲಾಡನ್ನು ನೈವೇದ್ಯವಾಗಿ ಅರ್ಪಿಸಲಾಗಿದೆ.

ತಲೆಮಾರುಗಳಿಂದ ಪೂಜಿಸಿಕೊಂಡು ಬರಲಾಗುತ್ತಿರುವ ಈ ಧಾರ್ಮಿಕ ಪರಂಪರೆಯನ್ನು ಕುಟುಂಬಸ್ಥರು ಇಂದಿಗೂ ಸಡಗರದಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷವೂ ವಿಶಿಷ್ಟ ರೀತಿಯಲ್ಲಿ ಪೂಜೆ ನೆರವೇರಿಸುವ ಹಿರಿಯರ ಹಾದಿಯಲ್ಲೇ, ಈ ಬಾರಿ ಬೃಹತ್ ಗಾತ್ರದ ನೈವೇದ್ಯ ಸಿದ್ಧಪಡಿಸಿ ಗಣೇಶನಿಗೆ ಭಕ್ತಿಭಾವದಿಂದ ಅರ್ಪಿಸಲಾಗಿದೆ.
-
ವಿಶೇಷ ತಯಾರಿ: ಈ 25 ಕೆಜಿ ತೂಕದ ಮೋತಿಚೂರ್ ಮೋದಕ ಮಾದರಿಯ ಲಾಡನ್ನು ಕಾರವಾರದ ಪ್ರಸಿದ್ಧ ‘ಕೆಎಸ್‌ಆರ್ ಸ್ವೀಟ್ಸ್’ನಲ್ಲಿ ತಯಾರಿಸಲಾಗಿತ್ತು.
-
ಪ್ರಸಾದ ವಿತರಣೆ: ವಿಶೇಷ ಪೂಜೆಯ ನಂತರ ಈ ಬೃಹತ್ ನೈವೇದ್ಯವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಯಿತು.

ಶತಮಾನದ ಇತಿಹಾಸವಿರುವ(Century History) ಗಣಪತಿಯ ಪೂಜೆ ಹಾಗೂ ಈ ಬೃಹತ್ ನೈವೇದ್ಯವು ಬೈತಖೋಲ್ ಭಾಗದ ಗಣೇಶೋತ್ಸವದ ಕಳೆ ಹೆಚ್ಚಿಸಿದ್ದು, ಸ್ಥಳೀಯರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
