ಭಟ್ಕಳ (BHATKAL): ಚಾತುರ್ಮಾಸ್ಯದ ಕೊನೆಯ ದಿನವಾದ ಇಂದು ಶ್ರೀ  ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ(Sri Brahmananda Saraswati Swami) ಸೀಮೋಲ್ಲಂಘನ ಕಾರ್ಯಕ್ರಮ ಭಟ್ಕಳದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಕರಿಕಲ್ ದ್ಯಾನ ಮಂದಿರದಿಂದ ಶ್ರೀಗಳನ್ನು  ಮೆರವಣಿಗೆಯಲ್ಲಿ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ(SHIRALI SARADAHOLE SRI HALEKOTE HANUMANTHA TEMPLE) ಕರೆದೊಯ್ಯಲಾಗುವುದು. ಹನುಮಂತ ಶ್ರೀದೇವರಿಗೆ ಪೂಜೆಯ ನಂತರ  ಸಾರದಹೊಳೆ ನದಿ ತೀರದಲ್ಲಿ  11-30ಕ್ಕೆ ಗಂಟೆಗೆ ಗಂಗಾಪೂಜೆ (GANGAPOOJE) ಕಾರ್ಯಕ್ರಮ ನಡೆಯುವುದು.

ಬಳಿಕ ಸಾರದಹೊಳೆಯಿಂದ ಪುನಃ ಭಟ್ಕಳದ ಕರಿಕಲ್ ದ್ಯಾನ ಮಂದಿರಕ್ಕೆ ಸ್ವಾಮೀಜಿಗಳನ್ನು ಬೃಹತ್ ಭಕ್ತಸಾಗರದ ನಡುವೆ ಕರೆತರಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಕರಿಕಲ್ ದ್ಯಾನ ಮಂದಿರದಲ್ಲಿ ಸ್ವಾಮೀಜಿಯವರ ಪಾದಪೂಜೆಯ ನಂತರ  ಬೃಹತ್ ಧಾರ್ಮಿಕ  ಸಭಾ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ(UTTARPRADESHA) ಸಾಧುಸಂತರ  ಮಂಡಲಾಧ್ಯಕ್ಷರಾದ ಇರ್ವರು ಸ್ವಾಮೀಜಿಗಳು  ಹಾಗೂ ಗಣ್ಯರು ಹಾಜರಿರಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು   ಹಾಜರಿರುವಂತೆ ಭಟ್ಕಳ ತಾಲೂಕಿನ ಕರಿಕಲ್ ಚಾತುರ್ಮಾಸ ಸಮಿತಿಯವರು ವಿನಂತಿಸಿದ್ದಾರೆ.

ಇದನ್ನು ಓದಿ :
ಕಾರವಾರ ಜೈಲಿನಲ್ಲಿ ಖೈದಿಗಳ ರಂಪಾಟ

ದ್ವೀಪದಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ

ದೋಣಿ ಪಲ್ಟಿ ಮೀನುಗಾರ ನಾಪತ್ತೆ