ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) : ಆಗಸದೊಳಗೆ ಆರು ವರ್ಷದ ಬಾಲಕಿಯೊಬ್ಬಳ ಸಮಯಪ್ರಜ್ಞೆ, ಆಕೆ ನೀಡಿದ ಎಚ್ಚರಿಕೆ, ಭಾರತೀಯ ಪೈಲಟ್‌ನ(Indians Pilots) ಅಪ್ರತಿಮ ಸಾಹಸ ಹಾಗೂ ಕೆಲ ಪ್ರಯಾಣಿಕರ ಧೈರ್ಯದಿಂದ ಸಂಭವಿಸಬಹುದಾಗಿದ್ದ ಬಾರೀ ಪ್ರಮಾಣದ ವಿಮಾನ ದುರಂತವೊಂದು(Plane Tragedy) ತಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಆರು ವರ್ಷದ ನೀನಾ ಮಾನೆಸ್ ಎಂಬ ಬಾಲಕಿ ಫ್ಲೈದುಬೈ ವಿಮಾನದಲ್ಲಿ(PlyDubai Jet) ತನ್ನ ಪೋಷಕರ ಜೊತೆ ಪ್ರಯಾಣ ಬೆಳೆಸಿದ್ದಳು. ತಲಿ ಮಾನೆಸ್ ಮತ್ತು ಟ್ಜ್ವಿಕಾ ಮಾನೆಸ್ ಆಕೆಯ ಪಾಲಕರು. ಅವರೊಂದಿಗೆ ಪ್ರಯಾಣಿಸುತ್ತಿದ್ದ ಘಟನೆಗೆ ಕೆಲ ಕ್ಷಣಗಳ ಮೊದಲು ತಾಯಿಯೊಂದಿಗೆ ಆಕೆ ಶೌಚಾಲಯದತ್ತ ತೆರಳಿದ್ದಳು. ಈ ವೇಳೆ ಕಾಕ್‌ಪಿಟ್‌ನಿಂದ(Cockpit) ಕಿರುಚಾಟದ ಶಬ್ದ ಕೇಳಿ ಬಾಲಕಿ ಕೂಗಿಕೊಂಡಿದ್ದಾಳೆ. ಇದರಿಂದ ತಾಯಿ ತಲಿ ಮಾನೆಸ್ ಅನುಮಾನಗೊಂಡು ಕಾಕ್‌ಪಿಟ್‌ನತ್ತ ಧಾವಿಸಿದ್ದರು. ಆಗ ಆಕೆ ನೋಡಿದ ಕಂಡ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ಕಾಕ್‌ಪಿಟ್‌ನೊಳಗೆ ಎಲ್ಲೆಡೆ ರಕ್ತ ಆವರಿಸಿತ್ತು.

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್(Indian Capt Smith Machhar) ಮೇಲೆ ಒಮಾನಿ ಸಹಪೈಲಟ್ ಚಾಕುವಿನಿಂದ ದಾಳಿ ನಡೆಸುತ್ತಿದ್ದ ಎಂದು ತಲಿ ಮಾನೆಸ್ ಬಳಿಕ ಇಸ್ರೇಲ್ ಮಾಧ್ಯಮಗಳಿಗೆ (Isrel Media) ತಿಳಿಸಿದ್ದಾರೆ. “ಅವನು ಪೈಲಟ್‌ಗೆ ಚಾಕುವಿನಿಂದ ಇರಿಯುತ್ತಿದ್ದಾನೆ, ಯಾರಾದರೂ ಸಹಾಯ ಮಾಡಿ ಎಂದು ನಾನು ಕಿರುಚಿದೆ. ಆದರೆ ಆರಂಭದಲ್ಲಿ ಯಾರಿಗೂ ಏನಾಗುತ್ತಿದೆ ಎಂಬುದು ಅರ್ಥವಾಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ನೀನಾದ ತಂದೆ ಟ್ಜ್ವಿಕಾ ಮಾನೆಸ್ ತಮ್ಮ ಮಗಳ ಕಿರುಚಾಟ ಕೇಳಿ ಶೌಚಾಲಯದತ್ತ ಧಾವಿಸಿದ್ದರು. “ಅಪ್ಪಾ, ನಾವು ಸಾಯಲು ಬಯಸುವುದಿಲ್ಲ” ಎಂದು ಭಯದಿಂದ ಅಳುತ್ತಿದ್ದ ತಮ್ಮ ಮಗಳ ಮಾತುಗಳೇ ತಮ್ಮನ್ನು ಕಾಕ್‌ಪಿಟ್‌ನತ್ತ (Cockpit) ಓಡಿಹೋಗುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.

ಕಾಕ್‌ಪಿಟ್ ಬಳಿ ತಲುಪಿದಾಗ ಬಾಗಿಲು ಅರ್ಧ ತೆರೆದಿದ್ದು, ರಕ್ತದ ಮಡುವಿನಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಹಪೈಲಟ್‌ನೊಂದಿಗೆ (Copilot) ಹೋರಾಡುತ್ತಿದ್ದರು. ತೀವ್ರವಾಗಿ ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಅವರು ರಕ್ತದ ಮಡವಿನಲ್ಲಿದ್ದರೂ ಸಹಪೈಲಟ್ ಜೊತೆ ಹೋರಾಟ ನಡೆಸುತ್ತಿದ್ದರು ಎಂದು ಟ್ಜ್ವಿಕಾ ಮಾನೆಸ್ ತಿಳಿಸಿದ್ದಾರೆ.

ಕಾಕ್‌ಪಿಟ್ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಎಲ್ಲೆಡೆ ರಕ್ತದ ಕಲೆಗಳು . ತೀವ್ರವಾಗಿ ಗಾಯಗೊಂಡಿದ್ದ ಸ್ಮಿತ್ ಮಚ್ಚಾರ್ ಅವರು ಅಂಥ ಪರಿಸ್ಥಿತಿಯಲ್ಲೂ ಕಾಕ್‌ಪಿಟ್‌ ಬಾಗಿಲು ತೆರೆದು ಹೊರಬಂದಿದ್ದರು. ಅವರು ತೀವ್ರವಾಗಿ ರಕ್ತಸ್ರಾವವಾಗುತ್ತಾ ಕಾಕ್‌ಪಿಟ್‌ನಿಂದ ಹೇಗೋ ಹೊರಬಂದಾಗ, ಇನ್ನೊಬ್ಬ ಪೈಲಟ್ ಅವರ ಮೇಲೇರಿ ಚಾಕುವಿನಿಂದ ಇರಿಯುತ್ತಿದ್ದ ಎಂದು ಎಂದು ಮಾನೆಸ್ ಹೇಳಿದ್ದಾರೆ.

ಈ ವೇಳೆ ಟ್ಜ್ವಿಕಾ ಮಾನೆಸ್, ಅಸಾಫ್ ರಾಜುವಾನ್ ಹಾಗೂ ಯಾನಿವ್ ಹಯುನ್ ಎಂಬ ಮೂವರು ಪ್ರಯಾಣಿಕರು ಮಧ್ಯಪ್ರವೇಶಿಸಿ ಹೋರಾಡಿ ಹರಿತ ಆಯುಧವಿದ್ದ ಸಹಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲಿದ್ದ ಹೆಡ್‌ಫೋನ್‌ಗಳ ತಂತಿಗಳನ್ನು(Headphone wire) ಬಳಸಿ ಆತನ ಕೈಗಳನ್ನು ಕಟ್ಟಿ ಬಂಧಿಸಿದರು. ಘಟನೆಯ ಸಮಯದಲ್ಲಿ ವಿಮಾನವು ಸುಮಾರು 33 ಸಾವಿರ ಅಡಿ ಎತ್ತರದಿಂದ ಕೇವಲ ಒಂದು ನಿಮಿಷದಲ್ಲಿ 17 ಸಾವಿರ ಅಡಿ ಕೆಳಕ್ಕೆ ಕುಸಿದಿತ್ತು ಎಂದು ವರದಿಯಾಗಿದೆ.

ವಿಮಾನದೊಳಗೆ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಹಲವರು ಕಿರುಚತೊಡಗಿದ್ದರು. ಕೆಲ ಪ್ರಯಾಣಿಕರು ಆಸನಗಳಿಂದ ಮೇಲಕ್ಕೆ ಎಸೆಯಲ್ಪಟ್ಟಂತಾಗಿತ್ತು. ಈ ಅನುಭವವನ್ನು ಟ್ಜ್ವಿಕಾ ಮಾನೆಸ್ “ಭಯಾನಕ ಚಲನಚಿತ್ರದ(Cinema) ದೃಶ್ಯದಂತಿತ್ತು” ಎಂದು ಘಟನೆಯ ದೃಶ್ಯವನ್ನು ವರ್ಣಿಸಿದ್ದಾರೆ.

ದಾಳಿಕೋರನನ್ನು ನಿಯಂತ್ರಣಕ್ಕೆ ತಂದ ಬಳಿಕವೂ ಪರಿಸ್ಥಿತಿ ಸಹಜವಾಗಿರಲಿಲ್ಲ. ವಿಮಾನದಲ್ಲಿದ್ದ ಕರ್ತವ್ಯೇತರ ಇಬ್ಬರು ಪೈಲಟ್‌ಗಳು(Pilots) ಮುಂದೆ ಬಂದು ವಿಮಾನದ ನಿಯಂತ್ರಣ ವಹಿಸಿಕೊಂಡರು. ಬಳಿಕ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್(Capt Smith Machhar) ಅವರಿಗೆ ವಿಮಾನದಲ್ಲಿದ್ದ ದಂತವೈದ್ಯ ಶೋಟಾ ಮುಸಾಯೆವ್ ಪ್ರಾಥಮಿಕ ಚಿಕಿತ್ಸೆ ನೀಡಿದರು. “ವಿಮಾನದಲ್ಲಿ ವೈದ್ಯರು ಇದ್ದಾರೆಯೇ ಎಂದು ಕೇಳಿದಾಗ ಒಬ್ಬ ದಂತವೈದ್ಯ ಮುಂದೆ ಬಂದರು. ಅವರು ಕ್ಯಾಪ್ಟನ್‌ಗೆ ಆಮ್ಲಜನಕ ನೀಡಿ, ಕಂಬಳಿಗಳು ಹಾಗೂ ಲಭ್ಯವಿದ್ದ ಸಾಧನಗಳ ನೆರವಿನಿಂದ ರಕ್ತಸ್ರಾವ ತಡೆದು ಅವರ ಜೀವ ಉಳಿಸಿದರು” ಎಂದು ಟ್ಜ್ವಿಕಾ ಮಾನೆಸ್ ಹೇಳಿದ್ದಾರೆ.

ನಂತರ ಪ್ರಯಾಣಿಕರನ್ನು ಬದಲಿ ವಿಮಾನದ ಮೂಲಕ ಟೆಲ್ ಅವೀವ್‌ಗೆ ಕಳುಹಿಸಲಾಗಿದ್ದು, ಬುಧವಾರ ರಾತ್ರಿ ವೇಳೆಗೆ ಎಲ್ಲರೂ ಸುರಕ್ಷಿತವಾಗಿ ಇಸ್ರೇಲ್(Isrel) ತಲುಪಿದರು. ಈ ಘಟನೆಯ ಬಳಿಕ ಇಸ್ರೇಲ್‌ಗೆ ಮತ್ತು ಇಸ್ರೇಲ್‌ನಿಂದ ಸಂಚರಿಸುವ ತನ್ನ ಎಲ್ಲಾ ವಿಮಾನ ಸೇವೆಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಫ್ಲೈದುಬೈ (Flydubai) ಪ್ರಕಟಿಸಿದೆ.

ಘಟನೆಯಲ್ಲಿ ಗಾಯಗೊಂಡ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್(Indian Capt Smith Machhar) ಅವರ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ರಾಯಭಾರ(Indian Embassy) ಕಚೇರಿ ತಿಳಿಸಿದೆ. ತಬುಕ್ ಆಸ್ಪತ್ರೆಯಲ್ಲಿ(Tabuk Hospital) ಚಿಕಿತ್ಸೆ ಪಡೆದ ಬಳಿಕ ಅವರನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಒಮಾನಿ ಪ್ರಜೆಯಾಗಿರುವ ಶಂಕಿತ ಸಹಪೈಲಟ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಘಟನೆಯ ಹಿಂದಿನ ಉದ್ದೇಶ ಏನು ಎಂಬುದರ ಕುರಿತು ಸೌದಿ ಅರೇಬಿಯಾ(Soudi Arebia), ಯುಎಇ(UAE), ಅಮೆರಿಕ(America), ಒಮಾನ್(Oman) ಹಾಗೂ ಇಸ್ರೇಲ್(Isrel) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಯೋತ್ಪಾದಕ(Terrasim) ಕೃತ್ಯದಿಂದ ಹಿಡಿದು ಮಾನಸಿಕ ಆರೋಗ್ಯ ಸಮಸ್ಯೆಯವರೆಗಿನ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು (Isrel PM Benjamin’s Netanyahu) ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಶ್ಲಾಘಿಸಿದ್ದು, “ತೀವ್ರವಾಗಿ ಗಾಯಗೊಂಡಿದ್ದರೂ ಅವರು ಪ್ರತಿರೋಧ ತೋರಿದರು. ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಕಲ್ಪಿಸಿದರು. ಇದರಿಂದ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತ ತಪ್ಪಿತು” ಎಂದು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.