ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಕಳೆದ ಕೆಲ ದಿನಗಳಿಂದ ಆತಂಕ ಎದುರಿಸುತ್ತಿದ್ದ ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತ್(Chittakul Panchayt) ವ್ಯಾಪ್ತಿಯ ಬಿಡ್ತುಲಭಾಗ ನಾಗರಿಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ಚಿರತೆ(Leopard) ಕೂಗಾಟದ ಶಬ್ದಕ್ಕೆ ಹೆದರಿದ ನಾಗರಿಕರ ಆತಂಕವನ್ನ ಅರಣ್ಯ ಇಲಾಖೆ(Forest Department) ಪಂಜರ ಇಟ್ಟು ದೂರವಾಗಿಸಿದೆ.

ಬಿಡ್ತುಲಭಾಗದ ಮಾಲ್ಕಿ ಜಾಗದ ಬಳಿ ಕೆಲ‌ ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಚಿರತೆ ಕೂಗುವ(Leopard Sound) ಶಬ್ಧ ಕೇಳಿಬರುತಿತ್ತು. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸ್ಥಳದಲ್ಲಿ ಪಂಜರ ಅಳವಡಿಸಿತ್ತು.

ರವಿವಾರ ರಾತ್ರಿ ಪಂಜರಕ್ಕೆ ಚಿರತೆ ಬಿದ್ದಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಸೆರೆಯಾದ ಚಿರತೆಯನ್ನು ಸೂಕ್ತ ಸ್ಥಳಕ್ಕೆ ಒಯ್ದು ಸುರಕ್ಷಿತವಾಗಿ ಬಿಡಲು ಅರಣ್ಯ ಇಲಾಖೆ ಪ್ಲ್ಯಾನ್ ಮಾಡಿದೆ. ಚಿತ್ತಾಕುಲ ವ್ಯಾಪ್ತಿಯ ಕಣಸಗಿರಿ, ಬಿಡ್ತುಲಭಾಗ, ಅಸ್ನೋಟಿ, ಅರ್ಜುನಕೋಟ್ ಭಾಗದಲ್ಲಿ ಚಿರತೆ ಸಂಚಾರದ ಸುದ್ದಿ ಆಗಾಗ ಕೇಳಿ ಬರುತ್ತಲೆ ಇದೆ.