ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಪಣಜಿ(Panaji) : ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಗೋವಾದ (Goa) ಮೀರಾಮಾರ್ ಬೀಚ್(Meeramar Beach) ಬಳಿ ನಡೆದಿದೆ.

ಹನ್ನೊಂದು ವರ್ಷದ ಬಾಲಕಿ ಮೇಲೆ ನಡೆದ ಕರಾಳ ಘಟನೆ ಗೋವಾದಲ್ಲಿ(Goa)  ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಕಾಡುವಂತೆ ಮಾಡಿದೆ.

ಅಕ್ಟೋಬರ್‌ ಮೂರರಂದು ಮಧ್ಯಾಹ್ನ ಸಂತ್ರಸ್ತ ಬಾಲಕಿ ಮೀರಾಮಾರ್ ನಿಂದ ಕರಂಜಾಳೆಗೆ(Meeramar to Karanjare) ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದಳು. ಅದೇ ಸಮಯದಲ್ಲಿ ಕರಂಜಾಳೆಯಲ್ಲಿ ವಾಸಿಸುವ ನೇಪಾಳ ಮೂಲದ ಜೀವನಕುಮಾರ (22) ಎಂಬ ನೇಪಾಳ ಮೂಲದ(Nepal native) 22 ವರ್ಷದ ಯುವಕ ಈಕೆಯನ್ನು ಸಂಪರ್ಕಿಸಿ ನಿರ್ಜನ ಪ್ರದೇಶಕ್ಕೆ ಆಮಿಷವೊಡ್ಡಿ ಕರೆದೊಯ್ದಿದ್ದ ಎನ್ನಲಾಗಿದೆ.  ಅಲ್ಲಿ ಅವನು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಎಂದು ಹೇಳಲಾಗುತ್ತಿದೆ. ನಂತರ ತೀವ್ರ ಮಾನಸಿಕ ಆಘಾತದಲ್ಲಿದ್ದ ಬಾಲಕಿ ಭಯಭೀತಳಾಗಿ ಮನೆಗೆ ತಲುಪಿದಳು. ನಂತರ ಅವಳು ಇಡೀ ಘಟನೆಯನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ.

ಘಟನೆಯ ಬಗ್ಗೆ ಸಂತ್ರಸ್ತೆಯ  ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಣಜಿ ಪೊಲೀಸರು(Panaji Police) ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.ಅಲ್ಲದೆ ಪೊಲೀಸರು ಸಂತ್ರಸ್ತೆಯ ಅಧಿಕೃತ ಹೇಳಿಕೆಯನ್ನು ದಾಖಲಿಸಿ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು  ತನಿಖೆ  ಕೈಗೊಂಡಿದ್ದಾರೆ.