ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿರಸಿ(Sirsi) : ಉತ್ತರಕನ್ನಡ ಜಿಲ್ಲೆಯ ಶಿರಸಿ ಜಿಲ್ಲಾ ಪಂಚಾಯತ ವಿಭಾಗೀಯ ಕಚೇರಿಯಲ್ಲಿ ಲೋಕಾಯುಕ್ತ ದಾಳಿ(Lokayukta Raid) ನಡೆದಿದೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ  ಲೆಕ್ಕಪರಿಶೋಧಕ ಮಲ್ಲಿಕಾರ್ಜುನ್ ಪಾಟೀಲ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.  ಮುಂಡಗೋಡಿನ(Mundgod) ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಎಂಬುವವರ ಬಳಿ ಗುತ್ತಿಗೆ ಕೆಲಸದ ಬಿಲ್ ಮಾಡಲು ಮಲ್ಲಿಕಾರ್ಜುನ 10 ಸಾವಿರ ರೂ ಲಂಚ ಕೇಳಿದ್ದರು. ಹಣ  ನೀಡುವ ಸಂದರ್ಭದಲ್ಲಿ ಬುಧವಾರ ಸಂಜೆ  ಲೋಕಾಯುಕ್ತ ಡಿವೈಎಸ್ಪಿ(Lokayukta DYSP) ಧನ್ಯಾ ನಾಯಕ್, ಸಿಪಿಐ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ದಾಳಿ ನಡೆಸಲಾಗಿದೆ.

 ಮಲ್ಲಿಕಾರ್ಜುನ್ ಪಾಟೀಲ್ ವಿರುದ್ಧ ಗುತ್ತಿಗೆದಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶಿರಸಿ ಜಿಪಂ(Sirsi ZP) ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು.  ಗುತ್ತಿಗೆ ಹಣ ನೀಡದ ಕಾರಣಕ್ಕಾಗಿ  ನ್ಯಾಯಾಲಯದಿಂದ ಜಿಪಂ ಕಚೇರಿಯ ಜಪ್ತಿ ಆದೇಶವಾಗಿತ್ತು. ಒಂದು ವರ್ಷದ ಹಿಂದೆ ಇದೇ ವಿಭಾಗೀಯ ಕಚೇರಿಯಲ್ಲಿ ಸುರೇಶ ಬಿಳಗಿ ಎಂಬುವವರ ಮೇಲೂ ದಾಳಿಯಾಗಿತ್ತು.