ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ(NDA Candidate) ಎಸ್. ವಿ.ಸಂಕನೂರು(S V Sankanuru) ಮೂರನೇ ಬಾರಿಯ ಗೆಲುವಿನೊಂದಿಗೆ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿ ಅಭ್ಯರ್ಥಿ ಮೋಹನ ಲಿಂಬಿಕಾಯಿ (Mohan Limbikayi) ಸೋಲು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್ 4055 ಮೂರನೇ ಅತಿ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಈ ಬಾರೀ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತಗಳು ತಿರಸ್ಕೃತಗೊಂಡಿವೆ.
ಎನ್.ಡಿ.ಎ ಬೆಂಬಲಿತ ಬಿಜೆಪಿಯ ಎಸ್.ವಿ. ಸಂಕನೂರು ಈಗಾಗಲೇ ಹಿಂದಿನ ಎರಡು ಅವಧಿಗೆ ಗೆಲುವು ಸಾಧಿಸಿ ಕಣಕ್ಕಿಳಿದರು. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾದುಕೊಂಡಿದ್ದ ಸಂಕನೂರು ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ಗೆಲ್ಲುವ ಅತಿಯಾದ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಸೋತಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆಯ ನಂತರ ಮೂರು ಮತಗಳ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಮರು ಎಣಿಕೆ ಮಾಡಲಾಗಿತ್ತು. ಮೊದಲ ಸುತ್ತಿನಲ್ಲಿ ಎನ್.ಡಿ.ಎ ಅಭ್ಯರ್ಥಿ ಸಂಕನೂರು ಮುನ್ನಡೆ ಕಾದುಕೊಂಡಿದ್ದು, ಕೊನೆಯವರೆಗೂ ಮುನ್ನಡೆ ಸಾಧಿಸುತ್ತಾ ಸಾಗಿದ್ದಾರೆ.
ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲ್ಲುವ ಹಂಬಲದಲ್ಲಿರುವ ಮೋಹನ ಲಿಂಬಿಕಾಯಿ ಸೋಲನ್ನು ಅನುಭವಿಸುವಂತಾಗಿದೆ.
ಎಲ್ಲಾ ಸುತ್ತಿನ ಮತ ಎಣಿಕೆಯಲ್ಲಿ ಎಸ್ ವಿ ಸಂಕನೂರು 33711 ಮತಗಳನ್ನ ಪಡೆದರೇ, ಮೋಹನ್ ಲಿಂಬಿಕಾಯಿ 24388ಮತಗಳನ್ನು ಪಡೆದುಕೊಂಡಿದ್ದಾರೆ. ಎನ್ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ 9323 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 10245 ಮತಗಳು ತಿರಸ್ಕೃತಗೊಂಡಿವೆ.