ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)  ಅಂಕೋಲಾ(Ankola) : ಜನವಸತಿ ಪ್ರದೇಶಗಳಲ್ಲಿ ಹಾಡಹಗಲೇ ಕಾಡುಕೋಣಗಳ(Wild Boars) ಹಿಂಡು ಕಾಣಿಸಿಕೊಳ್ಳುತ್ತಿದ್ದು, ನಾಗರಿಕರ  ಆತಂಕ ಹೆಚ್ಚಿಸುತ್ತಿರುವ ಘಟನೆ ತಾಲೂಕಿನ  ಹೆಬ್ಬಾರಗುಡ್ಡದ(Hebbargudda) ಸಮೀಪ ನಡೆದಿದೆ.

ಡೋಂಗ್ರಿ(Dongri) ಗ್ರಾ.ಪಂ ವ್ಯಾಪ್ತಿಯ ಹೆಬ್ಬಾರಗುಡ್ಡ ಗ್ರಾಮವು ಅರಣ್ಯದಿಂದಲೇ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು, ಕಾಡು ಪ್ರಾಣಿಗಳ(Wild Animals) ಸಂಖ್ಯೆಯೂ ಸಾಕಷ್ಟಿದೆ.  ಗ್ರಾಮದಲ್ಲಿ ಸರಿಸುಮಾರು 21 ರೈತ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಕಾಡು ಪ್ರಾಣಿಗಳಿಂದ ಈ ಹಿಂದೆ ತೋಟ-ಗದ್ದೆಗಳಿಗೆ ತೊಂದರೆಯಾಗುತಿತ್ತು. ಆದರೆ ಸ್ಥಳೀಯರ ಜೀವಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಕಾಡುಕೋಣಗಳು ಗೋಚರಿಸಿಕೊಂಡದ್ದು ಅಪರೂಪ.

ಆದರೆ ಈಗ ಜನವಸತಿ ಪ್ರದೇಶಗಳಲ್ಲಿಯೇ ಕಾಡುಕೋಣಗಳು(Wild Boars) ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿದೆ. ಕೃಷಿ ಭೂಮಿ ಸೇರಿದಂತೆ ಜನರು ಸಂಚರಿಸುವ ರಸ್ತೆಯಲ್ಲಿಯೇ ಕಾಡು ಕೋಣಗಳು ಓಡಾಡುತ್ತಿದೆ. ಹೀಗಾಗಿ ದ್ವಿಚಕ್ರ  ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಮಹಿಳೆಯರು ಸೇರಿದಂತೆ ದಿನನಿತ್ಯ ಕೂಲಿ ಕೆಲಸಕ್ಕೆ ತೆರಳುವವರು ಭಯದ ವಾತಾವರಣದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ  ಅರಣ್ಯ ಇಲಾಖೆಗೆ(Forest Department) ವಿಷಯ ತಿಳಿಸಿದ್ದು  ಅಗತ್ಯ ಕ್ರಮವಹಿಸಬೇಕು ಹಾಗೂ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.