ಬೆಂಗಳೂರು(BANGLORE): ಮುಂದಿನ ತಿಂಗಳಿಂದ ಅಂಗನವಾಡಿಗಳಲ್ಲಿ  ಗಟ್ಟಿಬೆಲ್ಲ ವಿತರಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಲಕರು ನಿರಾಕರಿಸಿದ ಕಾರಣ ಆರ್ಗ್ಯಾನಿಕ್ ಬೆಲ್ಲದ(ORGANIC JAGGERY) ಬದಲಿಗೆ ಗಟ್ಟಿ ಬೆಲ್ಲವನ್ನೇ ಅಂಗನವಾಡಿ ಕೇಂದ್ರಗಳಲ್ಲಿ (ANGANAWADI CENTER)ನೀಡಲಾಗುವುದು. ಒಂದೂವರೆ ವರ್ಷದ ಹಿಂದೆಯೇ ಅಂಗನವಾಡಿ ಕೇಂದ್ರಗಳಲ್ಲಿ ಆರ್ಗ್ಯಾನಿಕ್ ಬೆಲ್ಲ ನೀಡಲಾಗುತ್ತಿತ್ತು. ಆದರೆ, ಪಾಲಕರು ವಿರೋಧಿಸಿದ್ದರಿಂದ ನಿಂತಿತು. ಅಕ್ಟೋಬ‌ರ್ 1ರಿಂದಲೇ ಗಟ್ಟಿ ಬೆಲ್ಲ ನೀಡುವುದಾಗಿ ಅವರು ಹೇಳಿದ್ದಾರೆ.

ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ(GRUHALAXMI) ಯೋಜನೆಯನ್ನ ಬಂದ್‌ ಮಾಡುವುದಿಲ್ಲ. ಗೃಹಲಕ್ಷ್ಮಿ ಬಗ್ಗೆ ಈಗಾಗಲೇ ಹಲವು ಬಾರೀ ಸ್ಪಷ್ಟನೆ ನೀಡಿದ್ದೇನೆ. ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರ. ಕಳೆದೆರಡು ತಿಂಗಳಿಂದ ಜಮಾ ಆಗದಿರುವ ಹಣವನ್ನು ಒಂದೇ ಬಾರಿ ಅಕೌಂಟ್‌ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂರು ತಿಂಗಳ ಹಿಂದಷ್ಟೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಕೂಡ ಅಷ್ಟು ಬಾಕಿ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಚಿತ್ರರಂಗದ ಕಲಾವಿದೆಯರ ಜತೆ ಮಹಿಳಾ ಆಯೋಗ ಸಭೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಖಂಡಿತಾ ಸಮಿತಿ ರಚನೆಯಾಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಎಂದೇ ಆಶಿಸುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ ಎಂದರು.

ಇದನ್ನು ಓದಿ : ಆಸ್ಪತ್ರೆಗೆ ಬರುತ್ತಿದ್ದ ದಂಪತಿ ಕಾರಿಗೆ ಬಸ್ ಡಿಕ್ಕಿ. ಸಾವು

ಬಿಸಿಲಿನ ತಾಪಕ್ಕೆ ಯುವಕ ಸಾವು

ಎಂಟು ವಾಹನಗಳ ನಡುವೆ ಅಪಘಾತ.

ವಿಶ್ವ ದಾಖಲೆ ಬರೆದ ಪ್ರಜಾಪ್ರಭುತ್ವ ದಿನಾಚರಣೆ